Advertisement

ದಾರ್ಶನಿಕರ ಚಿಂತನೆಗಳೇ ಭಾರತೀಯ ಸಂಸ್ಕೃತಿ

01:02 PM Oct 10, 2018 | |

ವಿಜಯಪುರ: ಬುದ್ಧ, ಬಸವ ಮತ್ತು ವಾಲ್ಮೀಕಿಯಂತ ದಾರ್ಶನಿಕರು ತಮ್ಮ ಚಿಂತನೆ ಮೂಲಕ ನಮ್ಮ ಸಂಸ್ಕೃತಿಯನ್ನು ಶ್ರೀಮಂತೊಗಳಿಸಿದ್ದಾರೆ ಎಂದು ಸಂಶೋಧಕ ಡಾ| ಎಂ.ಎಸ್‌. ಮದಭಾವಿ ಹೇಳಿದರು. ಭಾರತೀಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯ ರಾಷ್ಟ್ರೀಯ ನ್ಯಾಸ್‌ (ಇಂಟ್ಯಾಕ್‌) ಮತ್ತು ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದ ಸಂಯುಕ್ತ ಸಹಯೋಗದಲ್ಲಿ ನಡೆದ ವಿವಿಧ ವಿಷಯಗಳ ಕುರಿತಾದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಬುದ್ಧ, ಬಸವಣ್ಣ ಸೇರಿದಂತೆ ಅನೇಕ ದಾರ್ಶನಿಕರು ತಮ್ಮ ಉದಾತ್ತ ತತ್ವ-ಚಿಂತನೆಗಳ ಮೂಲಕ ನಮ್ಮ ಭವ್ಯ ಸಂಸ್ಕೃತಿಯ ಶ್ರೀಮಂತಿಕೆ ಇನ್ನಷ್ಟೂ ಹೆಚ್ಚಿಸಿದ್ದಾರೆ. ಅವರ ಮಾರ್ಗದಲ್ಲಿಯೇ ನಾವು ಸಾಗಿ ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಮತ್ತಷ್ಟು ಬೆಳೆಸಬೇಕಿದೆ. ಭಾರತೀಯ ಭವ್ಯ ಸಂಸ್ಕೃತಿಯ ಮಹತ್ವವವನ್ನು ಅರಿತುಕೊಳ್ಳಬೇಕಿದೆ ಎಂದರು.

ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಪ್ರಸಾರ ಮಾಡುವಲ್ಲಿ ವಿವಿಧ ಸಂಸ್ಥೆಗಳ ಕಾರ್ಯ ಪ್ರಶಂಸನೀಯ. ಪ್ರಶಿಕ್ಷಣಾರ್ಥಿಗಳು ಹಾಗೂ ಭಾವಿ ಶಿಕ್ಷಕರು ತಾವು ಭಾರತೀಯ ಸಂಸ್ಕೃತಿಯನ್ನು ಕ್ರಿಯಾಶೀಲವಾಗಿ ಅಳವಡಿಸಿಕೊಂಡಾಗ ನಿಮ್ಮ ಕೈಯಲ್ಲಿ ತಯಾರಾಗುವ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಪರಂಪರೆ ಅಧ್ಯಯನ ಮಾಡುವಂತೆ ಮಾಡಿದರೆ ಮಾತ್ರ ಭಾರತೀಯ ಸಂಸ್ಕೃತಿ ಶ್ರೀಮಂತ ಆಗಲು ಸಾಧ್ಯ ಎಂದರು. 

ಖ್ಯಾತ ಸಂಶೋಧಕ ಡಾ| ಕೃಷ್ಣ ಕೊಲ್ಹಾರ ಕುಲಕರ್ಣಿ ವಿಜಯಪುರದ ಇತಿಹಾಸ ಮತ್ತು ರಾಜ ಮಹಾರಾಜರುಗಳ ಆಳ್ವಿಕೆ ವಿಷಯದ ಕುರಿತು, ಡಾ| ಶ್ರೀಕಾಂತ ಪತ್ತಾರ ಅವರು ಶಾಲೆ ಮತ್ತು ಕಾಲೇಜುಗಳಲ್ಲಿ ಭಾರತೀಯ ಸಂಸ್ಕೃತಿ ಮಹತ್ವದ ಕುರಿತು. ಡಾ| ಡಿ.ಜಿ. ಕುಲಕರ್ಣಿ ಭಾರತೀಯ ಸಂಸ್ಕೃತಿ ಕುರಿತು ಹಾಗೂ ಡಾ| ಎಸ್‌.ಕೆ. ಕೊಪ್ಪಾ ಕರ್ನಾಟಕದ ಸಂಸ್ಕೃತಿ ವಿಷಯದ ಕುರಿತು ಉಪನ್ಯಾಸ ನೀಡಿದರು. ಡಾ| ವಿ.ಡಿ. ಐಹೊಳ್ಳಿ, ಎಂ.ಬಿ. ಕುರವತ್ತಿ, ಬಸಮ್ಮ ಮುತ್ತಪ್ಪನವರ, ಚಂದು ಮಾದರ, ಗುತ್ತನಗೌಡ ಬಿರಾದಾರ, ಎ.ಬಿ. ಬೂದಿಹಾಳ, ಎಸ್‌.ಎಸ್‌. ಹುರಕಡ್ಲಿ, ರಾಕೇಶ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next