Advertisement

ಭಾರತದ ಔಷಧ ರಫ್ತಿನಲ್ಲಿ ಶೇ.18ರಷ್ಟು ಪ್ರಗತಿ : 24.44 ಶತ ಕೋಟಿ ಡಾಲರ್‌ ಮೌಲ್ಯದ ಔಷಧ ರಫ್ತು

10:07 PM Apr 17, 2021 | Team Udayavani |

ನವದೆಹಲಿ: ಕೊರೊನಾ ಕಾರಣದಿಂದ ದಿನೇದಿನೆ ನಕಾರಾತ್ಮಕ ಸುದ್ದಿಗಳು ಹೊರಬರುತ್ತಿರುವ ನಡುವೆ ಭಾರತ ಔಷಧ ಕ್ಷೇತ್ರ ಮಾತ್ರ ಭಾರೀ ಪ್ರಗತಿ ಸಾಧಿಸಿದೆ. 2020-21ರ ವಿತ್ತೀಯ ವರ್ಷದಲ್ಲಿ ಭಾರತದ ಔಷಧಗಳ ರಫ್ತು ಪ್ರಮಾಣದಲ್ಲಿ ಶೇ.18ರಷ್ಟು ಪ್ರಗತಿಯಾಗಿದೆ. ಅಂದರೆ ಒಟ್ಟು 24.44 ಶತ ಕೋಟಿ ಡಾಲರ್‌ ಮೌಲ್ಯದ ಔಷಧ ರಫ್ತಾಗಿದೆ.

Advertisement

ಈ ವರ್ಷ ಬರೀ ಮಾರ್ಚ್‌ನಲ್ಲಿ 2.3 ಶತ ಕೋಟಿ ಡಾಲರ್‌ ಔಷಧ ರಫ್ತಾಗಿದೆ. ಇದು ಕಳೆದ ವಿತ್ತೀಯವರ್ಷದಲ್ಲೇ ತಿಂಗಳೊಂದರಲ್ಲಿ ದಾಖಲಾದ ಗರಿಷ್ಠ ರಫ್ತು ಪ್ರಮಾಣ ಎಂದು ಫಾರ್ಮಾಎಕ್ಸಿಲ್‌ (ಭಾರತೀಯ ರಫ್ತು ಉತ್ತೇಜನಾ ಆಯೋಗ) ಮಾಹಿತಿ ನೀಡಿದೆ. ಕೊರೊನಾ ಕಾರಣ ಕಳೆದ ವರ್ಷ ಮಾರ್ಚ್‌ನಲ್ಲಿ 1.54 ಶತ ಕೋ ಟಿ ಡಾಲರ್‌ ಮೊತ್ತದ ಔಷಧ ರಫ್ತಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿಯ ಮಾರ್ಚ್‌ನಲ್ಲಿ ಶೇ.48.5ರಷ್ಟು ಪ್ರಗತಿ ಸಾಧ್ಯವಾಗಿದೆ.

ಕಳೆದ ವರ್ಷ ಜಗತ್ತಿನ ಇತರೆ ದೇಶಗಳ ಔಷಧ ಮಾರುಕಟ್ಟೆಗಳು ಕುಸಿತ ದಾಖಲಿಸಿದ್ದವು. ಅವುಗಳಿಗೆ ಹೋಲಿಸಿದರೆ ಭಾರತೀಯ ಮಾರುಕಟ್ಟೆ ಆಶಾದಾಯಕ ಬೆಳವಣಿಗೆ ಸಾಧಿಸಿದೆ. ಉತ್ತರ ಅಮೆರಿಕ, ಭಾರತ ಔಷಧ ಕ್ಷೇತ್ರದ ಬೃಹತ್‌ ಮಾರುಕಟ್ಟೆ ಎನ್ನುವುದನ್ನು ಇಲ್ಲಿ ಗಮನಿಸಬಹುದು.

ಇದನ್ನೂ ಓದಿ :ನಟ ವಿವೇಕ್‌ಗೆ ಭಾವಪೂರ್ಣ ವಿದಾಯ : ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ

Advertisement

Udayavani is now on Telegram. Click here to join our channel and stay updated with the latest news.

Next