Advertisement
ಲಾಕ್‌ಡೌನ್ ಸಂದರ್ಭ ಕಾಲ ಕಳೆಯಲು ಗ್ರಾಮೀಣ ಒಳಾಂಗಣ ಕ್ರೀಡೆ, ಪುಸ್ತಕ, ಮೊಬೈಲ್ ಹೀಗೆ ಮೊರೆಹೋದೆವು. ಏತನ್ಮಧ್ಯೆ ಕನ್ನಡ ವಾಹಿನಿಯಲ್ಲಿ ಮಹಾ ಭಾರತ ಪ್ರಸಾರ ಗೊಂಡಿತು. ಇದನ್ನು ಕಣ್ತುಂಬಿ ಕೊಳ್ಳಲು ಪ್ರಾರಂಭಿಸಿದೆವು. ಮಹಾ ಭಾರತ ಧಾರಾವಾಹಿ ಎಲ್ಲ ಬಗೆಯ ನೋಡುಗರನ್ನು ಸೆಳೆಯಿತು.
ಸತ್ಯ, ನ್ಯಾಯ, ಪರಮಾರ್ಥದ ಸಂದೇಶ ಮಹಾಭಾರತದಲ್ಲಿದೆ. ಧರ್ಮದ ದಾರಿಯಲ್ಲಿ ನಡೆಯು ವವನಿಗೆ ಅನೇಕ ಕಷ್ಟಗಳನ್ನು ಬಂದರೂ ಭಗವಂತ ಕೊನೆಗೆ ಕೈ ಹಿಡಿಯುತ್ತಾನೆ ಎಂಬ ದೃಢ ಸತ್ಯವಿತ್ತು. ಶ್ರೀ ಕೃಷ್ಣನ ಅಭಯ ಪಾಂಡವರಂತಹ ಧರ್ಮಾತ್ಮರಿಗೆ ದೊರೆತದ್ದನ್ನು ಕಾಣಬಹುದು. ಅಧರ್ಮದಲ್ಲಿ ಸಾಗಿದ ಕೌರವರು ಶಕುನಿಯಂತಹ ಅಧರ್ಮಿಯೊಂದಿಗೆ ಸೇರಿ ತಮ್ಮ ನಾಶವನ್ನು ಬಯಸಿದರು.
ಪಾಂಡವರು ಒಂದೇ ಆತ್ಮದಂತೆ ಬದುಕಿ ದರು. ಶ್ರೀ ಕೃಷ್ಣ- ಅರ್ಜುನರು ಸ್ನೇಹದ ಗಟ್ಟಿ ತನ ವಿಶ್ವಕ್ಕೆ ಸಾರಿದರು. ಕರ್ಣ ತನ್ನ ಮಿತ್ರ ದುರ್ಯೋಧನನಿಗಾಗಿ ತನ್ನ ಪ್ರಾಣವನ್ನೆ ಮುಡಿ ಪಾಗಿಟ್ಟನು. ಆವಶ್ಯಕತೆಗೆ ತಕ್ಕಂತೆ ಬದಲಾಗುವ ಇಂದಿನ ಆಧುನಿಕ ಜನರ ಸ್ವಾರ್ಥ ಸ್ನೇಹಕ್ಕೆ ಅದ್ಭುತ ಪಾಠ.
Related Articles
Advertisement
ಕೃಷ್ಣನ ಭಗವದ್ಗೀತೆಭಗವದ್ಗೀತೆ ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರ, ಆತ್ಮ ಮತ್ತು ಪರ ಮಾತ್ಮನ ಸಮ್ಮಿಲನ. ಈ ಜೀವನ, ದೃಢತೆ, ಸ್ಥಿರ ಪ್ರಜ್ಞೆ, ಧ್ಯಾನ, ಧರ್ಮ ಪಾಲನೆ, ನಿಸ್ವಾರ್ಥ ಮನೋಭಾವ ಇವೆಲ್ಲವೂ ಭಗವದ್ಗೀತೆಯ ಕೊಡುಗೆ. ಇಡೀ ಮಹಾಭಾರತ ಯುದ್ಧದ ಕೇಂದ್ರ ಬಿಂದುವಾಗಿ ಅರ್ಜುನನ ಕೀರ್ತಿಯನ್ನು ಆಕಾಶದೆತ್ತರಕ್ಕೆರಿಸಿದ ಅದ್ಭುತ ಈ ಗೀತೆಯದ್ದು.