Advertisement

ಪತಿ ಪಾಸ್‌ಪೋರ್ಟಲ್ಲಿ ದಿಲ್ಲಿಗೆ

06:00 AM May 03, 2018 | |

ಲಂಡನ್‌: ಪತಿಯ ಪಾಸ್‌ಪೋರ್ಟ್‌ ಹೊಂದಿದ್ದ ಭಾರತ ಮೂಲದ ಮಹಿಳಾ ಉದ್ಯಮಿಯೊಬ್ಬರು ಯು.ಕೆ.ಯ ಮ್ಯಾಂಚೆಸ್ಟರ್‌ನಿಂದ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಬ್ಯುಸಿನೆಸ್‌ ಟ್ರಿಪ್‌ಗಾಗಿ ಅವಸರದಲ್ಲಿ ಹೊರಟ ಗೀತಾ ಮೋಧಾ, ಕಣ್ತಪ್ಪಿನಿಂದ ತಮ್ಮ ಪಾಸ್‌ಪೋರ್ಟ್‌ ಬದಲು ಪತಿಯ ಪಾಸ್‌ಪೋರ್ಟ್‌ ಜತೆಗೆ ಹೊರಟಿದ್ದಾರೆ. ಮ್ಯಾಂಚೆಸ್ಟರ್‌ನ ವಿಮಾನ ನಿಲ್ದಾಣದ ಅಧಿಕಾರಿಗಳೂ ಇದನ್ನು ಗಮನಿಸದೆ ಗೀತಾರಿಗೆ ವಿಮಾನ ಏರಲು ಅವಕಾಶ ಮಾಡಿಕೊಟ್ಟಿದ್ದಾರೆ. ನವದೆಹಲಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಅಚಾತುರ್ಯ ಪತ್ತೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿ ತನಿಖೆ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next