Advertisement

ಗೋಕಾರ್ಟ್ ನಲ್ಲಿ ತಲೆ ಕೂದಲು ಸಿಲುಕಿ ಭಾರತೀಯ ಮೂಲದ 15ರ ಹುಡುಗಿಗೆ ಗಂಭೀರ ಗಾಯ

10:43 AM Jan 05, 2023 | Team Udayavani |

ಜೋಹಾನ್ಸ್‌ಬರ್ಗ್: ಭಾರತೀಯ ಮೂಲದ 15ರ ಹರೆಯದ ಹುಡುಗಿಯೊಬ್ಬಳು ಮನರಂಜನಾ ಕೇಂದ್ರದಲ್ಲಿ ಗೋ-ಕಾರ್ಟ್‌ನಲ್ಲಿ ಕೂದಲು ಸಿಕ್ಕಿಹಾಕಿಕೊಂಡು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

Advertisement

ಕ್ರಿಸ್ಟನ್ ಗೋವೆಂದರ್ ಅವರು ಡರ್ಬನ್ ನ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದಾರೆ. ಅವರ ಬೆನ್ನುಹುರಿಗೆ ಹಾನಿಯಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕ್ರಿಸ್ಟನ್ ಗೋವೆಂದರ್ ಕಳೆದ ಬುಧವಾರ ಗಾಯಗೊಂಡಿದ್ದಾರೆ. ಆಕೆಯ ಸೊಂಟದಿಂದ ಯಾವುದೇ ಚಲನೆ ಇಲ್ಲ ಎಂದು ವೈದ್ಯರು ತಿಳಿಸಿದ್ದರು ಎಂದು ಆಕೆಯ ತಂದೆ ವೆರ್ನಾನ್ ಗೋವೆಂದರ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:ನಿಗದಿಯಾದಂತೆ ಅಲ್ ನಾಸರ್ ಗೆ ಪದಾರ್ಪಣೆ ಮಾಡುವುದಿಲ್ಲ ಕ್ರಿಸ್ಟಿಯಾನೋ ರೊನಾಲ್ಡೊ

ತನ್ನ ಮಗಳು ಕೇಂದ್ರದಲ್ಲಿ ಹೆಲ್ಮೆಟ್ ಧರಿಸುವ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿದ್ದಾಳೆ. ಅಲ್ಲದೆ ಅವಳ ಉದ್ದನೆಯ ಕೂದಲನ್ನು ಪೋನಿಟೇಲ್‌ ನಲ್ಲಿ ಕಟ್ಟಲಾಗಿತ್ತು ಎಂದು ಗೋವೆಂದರ್ ಹೇಳಿದರು.

Advertisement

ಗೋ ಕಾರ್ಟ್‌ನಲ್ಲಿನ ಉಪಕರಣಗಳು ದೋಷಯುಕ್ತವಾಗಿವೆ, ತಕ್ಷಣದ ನೆರವು ನೀಡಲು ವಿಫಲವಾಗಿದೆ ಎಂಬ ಗೋವೆಂದರ್ ಅವರ ಆರೋಪಗಳ ನಡುವೆ, ಘಟನೆ ನಡೆದ ಡರ್ಬನ್‌ ನ ಜನಪ್ರಿಯ ಗೇಟ್‌ ವೇ ಮಾಲ್‌ ನ ಮ್ಯಾನೇಜ್ ಮೆಂಟ್ ಯಾವುದೇ ಪ್ರತಿಕ್ರಿಯಿಸಲು ನಿರಾಕರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next