Advertisement

ಕೆನಡಾ ಸುಪ್ರೀಂಕೋರ್ಟ್‌ಗೆ ಸಿಕ್ಖ್ ಮಹಿಳೆ ಜಡ್ಜ್

03:45 AM Jun 25, 2017 | Team Udayavani |

ಟೊರೊಂಟೋ:  ಭಾರತೀಯ ಮೂಲದ ಮಾನವ ಹಕ್ಕು ಹೋರಾಟಗಾರ್ತಿ, ಸಿಕ್ಖ್ ಮಹಿಳೆ ಪಲ್ಬಿಂದರ್‌ ಕೌರ್‌ ಶೆರ್‌ಗಿಲ್‌ ಅವರು ಕೆನಡಾ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. 

Advertisement

ಈ ಅಪರೂಪದ ಗೌರವಕ್ಕೆ ಪಾತ್ರರಾದ ಮೊದಲ ಸಿಖ್‌ ಮಹಿಳೆ ಎಂಬ ಖ್ಯಾತಿಯನ್ನೂ ಪಂಜಾಬ್‌ ಮೂಲದ ಕೌರ್‌ ಪಡೆದಿದ್ದಾರೆ. ಶೆರ್‌ಗಿಲ್‌ ಆಯ್ಕೆ ಬಗ್ಗೆ ವಿಶ್ವ ಸಿಕ್ಖ್ ಸಮುದಾಯ ಸಂತಸ ವ್ಯಕ್ತಪಡಿಸಿದ್ದು ನಿಜಕ್ಕೂ ಇದೊಂದು ಮೈಲುಗಲ್ಲು ಎಂದು ಬಣ್ಣಿಸಿದೆ. ಅಟಾರ್ನಿ ಜನರಲ್‌ ಹಾಗೂ ನ್ಯಾಯಾಂಗ ಸಚಿವ ಜೊಡಿ ವಿಲ್‌ಸನ್‌ ರೇ ಅವರು ಶೆರ್‌ಗಿಲ್‌ರನ್ನು ಜಡ್ಜ್ ಆಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next