Advertisement

ಬಾಣದ ದಾಳಿಗೆ ಭಾರತೀಯ ಮೂಲದ ಗರ್ಭಿಣಿ ಸಾವು, ಮಗು ಬಚಾವ್!

12:32 PM Nov 14, 2018 | Sharanya Alva |

ಲಂಡನ್: ಬಾಣದ ದಾಳಿಯಿಂದ ಭಾರತೀಯ ಮೂಲದ ಗರ್ಭಿಣಿ ಸಾವನ್ನಪ್ಪಿರುವ ಘಟನೆ ಲಂಡನ್ ನಲ್ಲಿ ನಡೆದಿದ್ದು, ಪವಾಡ ಸದೃಶವೆಂಬಂತೆ ಹೊಟ್ಟೆಯಲ್ಲಿರುವ ಮಗು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿ ತಿಳಿಸಿದೆ.

Advertisement

ಈ ಘಟನೆ ಸೋಮವಾರ ಲಂಡನ್ ನ ಇಲ್ ಫೋರ್ಡ್ ಪ್ರದೇಶದಲ್ಲಿ ನಡೆದಿದೆ. ಭಾರತೀಯ ಮೂಲದ ದೇವಿ ಉನ್ಮಥಾಲ್ಲೆಂಗ್ಡೂ(35) ಎಂಬ ಗರ್ಭಿಣಿ ಮೇಲೆ 50ರ ಹರೆಯದ ರಮಾನೊಡ್ಗೆ ಉನ್ಮಥಾಲ್ಲೆಂಗ್ಡೂ ಎಂಬಾತ ಮರೆಯಲ್ಲಿ ನಿಂತು ಬಾಣ ಪ್ರಯೋಗಿಸಿದ್ದ. ಈತ ದೇವಿಯ ಮಾಜಿ ಪ್ರೇಮಿ ಎಂದು ವರದಿ ವಿವರಿಸಿದೆ.

ಬಾಣ ಗರ್ಭಿಣಿಯ ಹೊಟ್ಟೆಯನ್ನು ಸೀಳಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ಮೆಟ್ರೋಪೊಲಿಟಿಯನ್ ಪೊಲೀಸರು ತಿಳಿಸಿದ್ದಾರೆ.

ಪವಾಡಸದೃಶವೆಂಬಂತೆ ತುರ್ತು ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಮಗು ಪ್ರಾಣಾಪಾಯದಿಂದ ಬದುಕಿರುವುದಾಗಿ ವರದಿ ವಿವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next