Advertisement

Singapore Shopping Mall ನಲ್ಲಿ ಭಾರತೀಯ ಮೂಲದ ವ್ಯಕ್ತಿಯ ಹತ್ಯೆ

06:45 PM Apr 08, 2023 | Team Udayavani |

ಸಿಂಗಾಪುರ: ಸಿಂಗಾಪುರದ ಶಾಪಿಂಗ್ ಮಾಲ್ ವೊಂದರ ಮೆಟ್ಟಿಲಿನ ಮೇಲಿಂದ ತಳ್ಳಿ ಭಾರತೀಯ ಮೂಲದ ವ್ಯಕ್ತಿಯನ್ನು ಹತ್ಯೆಗೈದ ಘಟನೆ ಬೆಳಕಿಗೆ ಬಂದಿದೆ.

Advertisement

ಈ ಘಟನೆ ನಡೆದಿರುವುದು ಸಿಂಗಾಪುರದ ಆರ್ಚರ್ಡ್ ರಸ್ತೆಯಲ್ಲಿರುವ ಕಾಂಕಾರ್ಡ್ ಶಾಪಿಂಗ್ ಮಾಲ್ ನಲ್ಲಿ ಎಂದು ಸಿಂಗಾಪುರ ಪೊಲೀಸರು ಮಾಹಿತಿ ನೀಡಿದ್ದಾರೆ.

ಭಾರತೀಯ ಮೂಲದ ತೇವಂದ್ರನ್ ಷಣ್ಮುಗಂ(34) ಹತ್ಯೆಯಾದ ದುರ್ದೈವಿಯಾಗಿದ್ದು. ಮುಹಮ್ಮದ್ ಅಜ್ಫಾರಿ ಅಬ್ದುಲ್ ಕಹಾ (27) ಹತ್ಯೆಗೈದ ಆರೋಪಿ.

ಷಣ್ಮುಗಂ ಶಾಪಿಂಗ್ ಮಾಲ್ ನ ಮೆಟ್ಟಿಲುಗಳ ಬಳಿ ನಿಂತಿದ್ದ ಸಂದರ್ಭ ಅಲ್ಲಿಗೆ ಬಂದ ಕಹಾ ಹಿಂದಿನಿಂದ ತಳ್ಳಿದ್ದಾನೆ ಈ ವೇಳೆ ಮೆಟ್ಟಿಲುಗಳ ಮೇಲಿಂದ ಕೆಳಗೆ ಬಿದ್ದ ಷಣ್ಮುಗಂ ಎದೆ ಹಾಗೂ ತಲೆಗೆ ಗಂಭೀರ ಗಾಯಗಳಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಎನ್ನಲಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು ಶುಕ್ರವಾರ ಸಿಂಗಾಪುರದಲ್ಲೇ ಅಂತ್ಯಸಂಸ್ಕಾರ ನಡೆಸಲಾಯಿತೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಸದ್ಯ ಕಹಾ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಇದನ್ನೂ ಓದಿ:2007ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ: ಎಲ್ಲಾ 21 ಪೊಲೀಸರ ಖುಲಾಸೆ 

Advertisement

Udayavani is now on Telegram. Click here to join our channel and stay updated with the latest news.

Next