Advertisement

ಸಿಂಗಾಪುರ ಸುಪ್ರೀಂ ಕೋರ್ಟ್‌ ನ್ಯಾಯಾಂಗ ಆಯುಕ್ತರಾಗಿ ದೀದಾರ್‌ ಸಿಂಗ್‌

12:00 PM Jun 28, 2018 | udayavani editorial |

ಸಿಂಗಾಪುರ : 59ರ ಹರೆಯದ ಭಾರತ ಸಂಜಾತ, ಸಿಂಗಾಪುರದ ಬೌದ್ಧಿಕ ಆಸ್ತಿ ಕಾನೂನು ಪರಿಣತ ವಕೀಲ, ದೀದಾರ್‌ ಸಿಂಗ್‌ ಗಿಲ್‌ ಅವರನ್ನು ದೇಶದ ಸವೋಚ್ಚ ನ್ಯಾಯಾಲಯ ದೇಶದ ನ್ಯಾಯಾಂಗ ಆಯುಕ್ತರನ್ನಾಗಿ ನೇಮಿಸಿದೆ.

Advertisement

ದೇಶದ ಅಧ್ಯಕ್ಷ ಹಲೀಮಾ ಯಾಕೋಬ್‌ ಅವರು ದೀದಾರ್‌ ಸಿಂಗ್‌ ಗಿಲ್‌ ಅವರನ್ನು ಎರಡು ವರ್ಷಗಳ ಅವಧಿಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಂಗ ಆಯುಕ್ತರನ್ನಾಗಿ ನೇಮಿಸಿದರು. 

ಗಿಲ್‌ ಅವರು ಆಗಸ್ಟ್‌ 1ರಿಂದ ತಮ್ಮ ನೂತನ ಹೊಣೆಗಾರಿಕೆಯನ್ನು ಎರಡು ವರ್ಷಗಳ ಅವಧಿಗೆ ಆರಂಭಿಸುವರು ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟನೆ ತಿಳಿಸಿದೆ. ಗಿಲ್‌ ಅವರು 1983ರಲ್ಲಿ ಸಿಂಗಾಪುರ ನ್ಯಾಶನಲ್‌ ಯುನಿವರ್ಸಿಟಿಯ ಪದವಿ ಪಡೆದಿದ್ದು  ಈ ಮೊದಲು ಅವರು ಡ್ರೂ ಆ್ಯಂಡ್‌ ನೇಪಿಯರ್‌ ಕಾನೂನು ಸೇವಾ ಸಂಸ್ಥೆಯ ಬೌದ್ಧಿಕ ಆಸ್ತಿ ವಿಭಾಗದ ಆಡಳಿತ ನಿರ್ದೇಶಕರಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next