ನ್ಯೂಯಾರ್ಕ್: ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ತಾಯಿ ಮತ್ತು ಮಗಳು ಮೃತ ಪಟ್ಟು ತಂದೆ ಮತ್ತು ಮಗ ಗಾಯಗೊಂಡಿರುವ ಘಟನೆ ಅಮೆರಿಕದ ಒರೆಗಾನ್ ಸಿಟಿಯಲ್ಲಿ ನಡೆದಿದೆ.
ಒರೆಗಾನ್ ಸ್ಟೇಟ್ ಪೋಲೀಸ್ ಪ್ರಕಾರ ಕಾರು ಸಿಗ್ನಲ್ ಜಂಪ್ ಮಾಡಿರುವುದೇ ಈ ಅವಘಡಕ್ಕೆ ಕಾರಣ ಎಂದು ಹೇಳಿದ್ದಾರೆ.
ಮೃತರು ಮೂಲತಃ ಆಂಧ್ರಪ್ರದೇಶದ ಕೊನಕಂಚಿ ಗ್ರಾಮದವರಾದ ಗೀತಾಂಜಲಿ (32) ಹಾಗು ಆಕೆಯ ಪುತ್ರಿ ಹನಿಕಾ (5) ಎಂದು ಹೇಳಲಾಗಿದೆ, ಘಟನೆಯಲ್ಲಿ ಪತಿ ಹಾಗೂ ಮಗ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಭಾನುವಾರ ಗೀತಾಂಜಲಿ ಅವರ ಹುಟ್ಟುಹಬ್ಬ ಇದ್ದ ಕಾರಣ ಮನೆಮಂದಿ ದೇವಸ್ಥಾನಕ್ಕೆ ಭೇಟಿ ನೀಡುವ ಉದ್ದೇಶ ಹೊಂದಿದ್ದರು ಹಾಗಾಗಿ ಕುಟುಂಬ ಸದಸ್ಯರು ತಮ್ಮ ಕಾರಿನಲ್ಲಿ ದೇವಸ್ಥಾನಕ್ಕೆ ತೆರಳಿದ್ದಾರೆ, ಈ ವೇಳೆ ಕಾರು ದಕ್ಷಿಣ ಮೆರಿಡಿಯನ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಂದರ್ಭ ಸಿಗ್ನಲ್ ಜಂಪ್ ಮಾಡಿದ್ದಾರೆ ಈ ವೇಳೆ ಇನ್ನೊಂದು ಕಾರು ಇವರ ಕಾರಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ಮಗಳು ಸ್ಥಳದಲ್ಲೇ ಮೃತಪಟ್ಟರೆ ಮೂವರು ಗಂಭೀರ ಗಾಯಗೊಂಡಿದ್ದರು ಕೂಡಲೇ ಅವರನ್ನು ಏರ್ ಲಿಫ್ಟ್ ಮಾಡಿ ಆಸ್ಪತ್ರೆಗೆ ದಾಖಲಿಸಿದರೂ ಗೀತಾಂಜಲಿ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ, ಸದ್ಯ ತಂದೆ ಹಾಗೂ ಮಗ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: LS Polls: ನಮ್ಮ ಗೆಲುವು ನೂರಕ್ಕೆ ನೂರು ಗ್ಯಾರಂಟಿ: ರೋಡ್ ಶೋ ನಡೆಸಿ ಸಿಎಂ ಹೇಳಿಕೆ