Advertisement
ಆದರೆ ಇಲ್ಲೊಬ್ಬ ವೈದ್ಯ ತನ್ನ ಬಳಿಗೆ ಬರುತ್ತಿದ್ದ ರೋಗಿಗಳ ಇದೇ ಮನಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಅವರಿಗೆ ಲೈಂಗಿಕ ಕಿರುಕುಳ ನೀಡಿ ಇದೀಗ ವಿಚಾರಣೆಯನ್ನು ಎದುರಿಸುತ್ತಿರುವ ಘಟನೆ ಇಂಗ್ಲಂಡ್ ದೇಶದಲ್ಲಿ ನಡೆದಿದೆ. ಆದರೆ ವಿಚಿತ್ರವೆಂದರೆ ಇಂಗ್ಲಂಡ್ ನಲ್ಲಿ ಈ ರೀತಿಯ ಕೃತ್ಯ ಎಸಗಿರುವ ವ್ಯಕ್ತಿ ಭಾರತೀಯ ಮೂಲದವನೆಂಬುದೇ ಖೇದಕರ ಸಂಗತಿ.
ತನ್ನಲ್ಲಿಗೆ ತಪಾಸಣೆಗೆಂದು ಬರುತ್ತಿದ್ದ ಮಹಿಳಾ ರೋಗಿಗಳು ತಮ್ಮ ಸ್ತನ ಪರಿಕ್ಷೆಯನ್ನು ನಡೆಸುವಂತೆ ಅವರ ಮನವೊಲಿಸಲು ಶಾ ಹಾಲಿವುಡ್ ನಟಿಯರು ಮ್ಯಾಸ್ಟೆಕ್ಟಮಿ ಮಾಡಿಸಿಕೊಂಡಿರುವ ಸುದ್ದಿಯನ್ನು ಅವರಿಗೆ ವಿವರಿಸಿ ಬಳಿಕ ಅವರ ಸ್ತನ ಪರೀಕ್ಷೆ ನಡೆಸುವ ನೆಪದಲ್ಲಿ ಅವರಿಗೆ ಕಿರುಕುಳ ನೀಡುತ್ತಿದ್ದ ಎಂಬ ವಿಚಾರವೂ ಸಹ ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ ಬಹಿರಂಗಗೊಂಡಿದೆ. ಇದೇ ರೀತಿಯಲ್ಲಿ ಮಹಿಳೆಯರ ಗುಪ್ತಾಂಗ ಪರೀಕ್ಷೆಯ ನೆಪದಲ್ಲಿಯೂ ಸಹ ಮನೀಶ್ ಶಾ ಇದೇ ರೀತಿಯ ತಂತ್ರವನ್ನು ಬಳಸುತ್ತಿದ್ದ ಅಂಶವೂ ವಿಚಾರಣೆಯ ಸಂದರ್ಭದಲ್ಲಿ ಹೊರಬಿದ್ದಿದೆ. ಅಗತ್ಯವಿಲ್ಲದಿದ್ದರೂ ಮನೀಶ್ ಶಾ ತನ್ನ ವೃತ್ತಿಯ ಲಾಭವನ್ನು ಪಡೆದುಕೊಂಡು ತನ್ನಲ್ಲಿಗೆ ಬರುತ್ತಿದ್ದ ಮಹಿಳಾ ರೋಗಿಗಳ ಸ್ತನ, ಗುಪ್ತಾಂಗ ಮತ್ತು ಗುದದ್ವಾರ ಪರೀಕ್ಷೆಗಳನ್ನು ನಡೆಸುವ ನೆಪದಲ್ಲಿ ಅವರೊಂದಿಗೆ ಲೈಂಗಿಕವಾಗಿ ಅನುಚಿತ ರೀತಿಯಲ್ಲಿ ವರ್ತಿಸುತ್ತಿದ್ದ ಎಂದು ದೂರುದಾರರ ಪರ ವಕೀಲ ಕೇಟ್ ಬೆಕ್ಸ್ ನ್ಯಾಯಾಲಯದಲ್ಲಿ ತಮ್ಮ ವಾದ ಮಂಡನೆಯಲ್ಲಿ ಹೇಳಿಕೊಂಡಿದ್ದಾರೆ.
Related Articles
Advertisement