ನವದೆಹಲಿ: ಕೋವಿಡ್-19 ಮಹಾಮಾರಿಗೆ ಅಮೆರಿಕಾ ನ್ಯೂಯಾರ್ಕ್ ನಲ್ಲಿ ಭಾರತೀಯ ಮೂಲದ ವೈದ್ಯರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಎನ್ ಡಿಟಿವಿ ವರದಿ ತಿಳಿಸಿದೆ.
ಡಾ. ಸುಧೀರ್ ಎಸ್ ಚೌಹಾಣ್ ಕಳೆದ ಕೆಲವು ವಾರಗಳಿಂದ ಕೋವಿಡ್ 19 ಸೋಂಕಿನಿಂದ ಬಳಲುತ್ತಿದ್ದರು. ಆದರೆ ಮೇ 19 ರಂದು ತೀವ್ರ ಅನಾರೋಗ್ಯದಿಂದ ನಿಧನರಾದರು ಎಂದು ಎಎಪಿಐನ ಮಾಧ್ಯಮ ಸಂಯೋಜಕ ಅಜಯ್ ಘೋಷ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ. ಚೌಹಾನ್ ನ್ಯೂಯಾರ್ಕ್ ನ ಜಮೈಕಾ ಆಸ್ಪತ್ರೆಯಲ್ಲಿ ವೈದ್ಯರಾಗಿ ಮತ್ತು ಮತ್ತು ಐಎಂ ರೆಸಿಡೆನ್ಸಿಯ ಸಹಾಯಕ ಕಾರ್ಯಕ್ರಮ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಸೌಮ್ಯಸ್ವಭಾವ ಮತ್ತು ಕಾಳಜಿಯುಳ್ಳ ಮನೋಭಾವವನ್ನು ಹೊಂದಿದ್ದರು ಎಂದು ಮಗಳು ಸ್ನೇಹ ಚೌಹಾನ್ ಎಎಪಿಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮೊದಲು ಭಾರತೀಯ ಮೂಲದ ವೈದ್ಯರಿಬ್ಬರು(ತಂದೆ-ಮಗಳು) ನ್ಯೂಜೆರ್ಸಿಯಲ್ಲಿ ಕೋವಿಡ್ 19ಗೆ ಬಲಿಯಾಗಿದ್ದರು.
ಈಗಾಗಲೇ ಅಮೆರಿಕಾದಲ್ಲಿ 15 ಲಕ್ಷಕ್ಕಿಂತ ಹೆಚ್ಚು ಜನರಿಗೆ ವೈರಸ್ ತಗುಲಿದ್ದು 94 ಸಾವಿರಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದಾರೆ. ನ್ಯೂಯಾರ್ಕ್ ನಗರದಲ್ಲೇ ಅತೀ ಹೆಚ್ಚು ಜನರು ಸೋಂಕು ಪೀಡಿತರಾಗಿದ್ದು ಇಲ್ಲಿ 28 ಸಾವಿರ ಜನರು ಮೃತಪಟ್ಟಿದ್ದಾರೆ.