Advertisement

ಆಕಾಶ ಮಾರ್ಗದಲ್ಲೇ 2 ಬಾರಿ ಹೃದಯ ಸ್ತಂಭನಕ್ಕೊಳಗಾಗಿದ್ದ ಪ್ರಯಾಣಿಕನ ಜೀವ ಉಳಿಸಿದ ಭಾರತೀಯ ಮೂಲದ ವೈದ್ಯ..

03:16 PM Jan 06, 2023 | Team Udayavani |

ವಾಷಿಂಗ್ಟನ್/ನವದೆಹಲಿ: ದೀರ್ಘಕಾಲ ಪ್ರಯಾಣದ ವಿಮಾನವೊಂದರಲ್ಲಿ ಆಕಾಶ ಮಾರ್ಗದಲ್ಲಿಯೇ ಎರಡು ಬಾರಿ ಹೃದಯ ಸ್ತಂಭನಕ್ಕೊಳಗಾಗಿದ್ದ ಪ್ರಯಾಣಿಕರೊಬ್ಬರ ಜೀವವನ್ನು ಭಾರತೀಯ ಮೂಲದ ವೈದ್ಯರೊಬ್ಬರು ಉಳಿಸಿದ ಘಟನೆ ನಡೆದಿದ್ದು, ಡಾ.ವಿಶ್ವರಾಜ್ ವೇಮಲಾ ಅವರ ಕರ್ತವ್ಯ ಪ್ರಜ್ಞೆಗೆ ನೆಟ್ಟಿಗರು ಅಭಿನಂದನೆ ಸಲ್ಲಿಸಿದ್ದಾರೆ.

Advertisement

ಇದನ್ನೂ ಓದಿ:ಭ್ರಷ್ಟಾಚಾರ ರಕ್ತ ಬೀಜಾಸುರರನ್ನು ಹುಟ್ಟಿಸಿದ್ದೆ ಕಾಂಗ್ರೆಸ್ : ಪ್ರಹ್ಲಾದ್ ಜೋಶಿ

ಪತ್ರಿಕಾ ಪ್ರಕಟಣೆಯ ಪ್ರಕಾರ, ಡಾ.ವೇಮಲಾ ಅವರು ಬರ್ಮಿಂಗ್ ಹ್ಯಾಮ್ ನಲ್ಲಿ ಹೆಪಟೋಲೋಜಿಸ್ಟ್ (ರಕ್ತ ಸೋಂಕಿನ ತಜ್ಞ ವೈದ್ಯ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಡಾ. ವೇಮಲಾ ಕಳೆದ ವರ್ಷ ನವೆಂಬರ್ ನಲ್ಲಿ ಯುನೈಟೆಡ್ ಕಿಂಗ್ ಡಮ್ ನಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು. ಅವರು ತಮ್ಮ ತಾಯಿಯನ್ನು ಯುಕೆಯಿಂದ ತಾಯ್ನಾಡು ಬೆಂಗಳೂರಿಗೆ ಕರೆತರುತ್ತಿದ್ದರು. ಈ ಸಂದರ್ಭದಲ್ಲಿ ಏರ್ ಇಂಡಿಯಾ ವಿಮಾನದ ಸಿಬಂದಿ, ಪ್ರಯಾಣಿಕರೊಬ್ಬರಿಗೆ ಹೃದಯ ಸ್ತಂಭನವಾಗಿದ್ದು, ವಿಮಾನದಲ್ಲಿ ಯಾರಾದರು ವೈದ್ಯ ಪ್ರಯಾಣಿಕರಿದ್ದರೆ ತಕ್ಷಣವೇ ಆಗಮಿಸುವಂತೆ ಆಹ್ವಾನ ನೀಡಿದ್ದರು.

ಆಕಾಶ ಮಾರ್ಗದಲ್ಲೇ ಎರಡು ಬಾರಿ ಹೃದಯ ಸ್ತಂಭನಕ್ಕೊಳಗಾಗಿದ್ದ ಪ್ರಯಾಣಿಕನಿಗೆ ಡಾ.ವೇಮಲಾ ಅವರು ತಕ್ಷಣವೇ ಸ್ಪಂದಿಸುವ ಮೂಲಕ ಜೀವವನ್ನು ರಕ್ಷಿಸಿರುವುದಾಗಿ ವರದಿ ವಿವರಿಸಿದೆ.

Advertisement

ವಿಮಾನದೊಳಗೆ ದಿಢೀರನೆ ಹೃದಯ ಸ್ತಂಭನಕ್ಕೊಳಗಾಗಿದ್ದ ಪ್ರಯಾಣಿಕನಿಗೆ ಚಿಕಿತ್ಸೆ ನೀಡಲು ವಿಮಾನದಲ್ಲಿ ಯಾವುದೇ ವಿಶೇಷ ಸೌಲಭ್ಯಗಳಿಲ್ಲವಾಗಿತ್ತು. ಆದರೆ ಡಾ.ವೇಮಲಾ ಅವರು ಇತರ ಪ್ರಯಾಣಿಕರ ಬಳಿ ಇದ್ದ ಹೃದಯ ಬಡಿತದ ಮಾನಿಟರ್, ರಕ್ತದೊತ್ತಡ ಪರೀಕ್ಷಿಸುವ ಯಂತ್ರ, ಪಲ್ಸ್ ಆಕ್ಸಿಮೀಟರ್ ಬಳಸಿ ಆತನ ಜೀವಉಳಿಸಲು ಪ್ರಯತ್ನಿಸಿದ್ದರು. ಆಗ ಪ್ರಯಾಣಿಕ ಮತ್ತೊಮ್ಮೆ ಹೃದಯ ಸ್ಥಂಭನಕ್ಕೊಳಗಾಗಿದ್ದ. ಇದರಿಂದಾಗಿ ಆ ವ್ಯಕ್ತಿಯ ನಾಡಿ ಮಿಡಿತ ತುಂಬಾ ಕ್ಲೀಣಗೊಳ್ಳತೊಡಗಿತ್ತು. ರಕ್ತದೊತ್ತಡ ಕೂಡಾ ಕಡಿಮೆಯಾಗಿತ್ತು. ಸುಮಾರು ಐದು ಗಂಟೆಗಳ ಕಾಲ ಆಕಾಶ ಮಾರ್ಗದಲ್ಲಿ ಪ್ರಯಾಣಿಕನ ಜೀವ ಉಳಿಸಲು ಹರಸಾಹಸ ಪಡಲಾಗಿತ್ತು. ಈ ಸಂದರ್ಭದಲ್ಲಿ ಇತರ ಪ್ರಯಾಣಿಕರು ಭೀತಿಗೊಳಗಾಗಿದ್ದರು. ಕೊನೆಗೂ ಪೈಲಟ್ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಲು ವ್ಯವಸ್ಥೆ ಮಾಡಿದ್ದರು. ಅದರಂತೆ ಪ್ರಯಾಣಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಗೆ ದಾಖಲಾಗುವ ಮುನ್ನ ಪ್ರಯಾಣಿಕ ತನ್ನ ಜೀವ ಉಳಿಸಿದ್ದಕ್ಕಾಗಿ ಕಣ್ಣೀರಿಡುತ್ತಲೇ ಅಭಿನಂದನೆ ಸಲ್ಲಿಸಿರುವುದಾಗಿ ಡಾ.ವೇಮಲಾ ಅವರು ಘಟನೆಯನ್ನು ನೆನಪಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next