ನವ ದೆಹಲಿ : ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಹೈದರಾಬಾದ್ ನಗರದಲ್ಲಿ 100 ಆಕ್ಟೇನ್ ಪ್ರೀಮಿಯಂ ಪೆಟ್ರೋಲ್ ಅನ್ನು ಬಿಡುಗಡೆ ಮಾಡಿದೆ. ಎಕ್ಸ್ ಪಿ 100 ಎಂಬ ಪ್ರೀಮಿಯಂ ಇಂಧನವನ್ನು ಎಂಜಿನ್ ನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಉತ್ತಮ ಚಾಲನಾ ಸಾಮರ್ಥ್ಯವನ್ನು ನೀಡುತ್ತದೆ.
ಇಟಿಆಟೊ(ETAuto)ದ ವರದಿಯ ಪ್ರಕಾರ, ಪ್ರೀಮಿಯಂ ದರ್ಜೆಯ ಪೆಟ್ರೋಲ್ ಗೆ ಪ್ರತಿ ಲೀಟರ್ ಗೆ ₹ 160 ಬೆಲೆಯಿದೆ, ಮೊದಲ ಹಂತವಾಗಿ ಮುಂಬೈ, ಪುಣೆ, ದೆಹಲಿ, ಗುರುಗ್ರಾಮ್, ನೋಯ್ಡಾ, ಆಗ್ರಾ, ಜೈಪುರ, ಚಂಡೀಘರ್, ಲುಧಿಯಾನ ಮತ್ತು ಅಹಮದಾಬಾದ್‌ನಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಇಂಧನವನ್ನು ಮೊದಲು ಪರಿಚಯಿಸಲಾಗಿತ್ತು.
ಓದಿ : ಇಂದು ‘ಸಲಾರ್’ ಕುರಿತು ಬಿಗ್ ಅಪ್ಡೇಟ್ ನೀಡಲಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್….ಏನದು ?
2 ನೇ ಹಂತದ ವಿಸ್ತರಣೆಯಡಿಯಲ್ಲಿ ಹೈದರಾಬಾದ್, ಚೆನ್ನೈ, ಬೆಂಗಳೂರು, ಕೋಲ್ಕತಾ ಮತ್ತು ಭುವನೇಶ್ವರ ಮುಂತಾದ ನಗರಗಳಿಗೆ ವಿಸ್ತರಿಸುವುದಾಗಿ ಅವರು ಈ ಹಿಂದೆ ದೃಢಪಡಿಸಿದ್ದರು. ಈ ನಗರಗಳನ್ನು ಮಹತ್ವಾಕಾಂಕ್ಷೆಯ ಜನ ಸಂಖ್ಯಾಶಾಸ್ತ್ರ ಮತ್ತು ಪ್ರೀಮಿಯಂ ವಾಹನಗಳ ಲಭ್ಯತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.
“100 ಆಕ್ಟೇನ್ ಇಂಧನವು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ದಿನಕ್ಕೆ 200 ಲೀಟರ್ ಮಾರಾಟ ಆಗುತ್ತಿದ್ದ ಕೆಲವು ಕಡೆ ಈಗ ದಿನಕ್ಕೆ 300 ಲೀಟರ್ ಮಾರಾಟವಾಗುತ್ತಿದೆ. ವಾಹನಗಳ ಉತ್ತಮ ಕಾರ್ಯಕ್ಷಮತೆ ಮತ್ತು ವರ್ಧಿತ ಎಂಜಿನ್ ಬಾಳ್ವೆಗಾಗಿ ಇದು ಬ್ರ್ಯಾಂಡ್ ಇಂಧನ” ಎಂದು ಭಾರತೀಯ ಪೆಟ್ರೋಲಿಯಂ ಮಾರಾಟಗಾರರ ಜಂಟಿ ಕಾರ್ಯದರ್ಶಿ ರಾಜೀವ್ ಅಮರಮ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಒಕ್ಟಾಮ್ಯಾಕ್ಸ್(OCTAMAX) ತಂತ್ರಜ್ಞಾನವನ್ನು ಬಳಸಿಕೊಂಡು ಮಥುರಾದ ಇಂಡಿಯನ್ ಆಯಿಲ್ ಕಾರ್ಪ್ ನ ಸಂಸ್ಕರಣಾಗಾರದಲ್ಲಿ ಪ್ರೀಮಿಯಂ ಪೆಟ್ರೋಲ್ ಉತ್ಪಾದಿಸಲಾಗುತ್ತದೆ. ಬಿಎಸ್ 6 ಕಂಪ್ಲೈಂಟ್ ವಾಹನಗಳಿಗೆ ಪ್ರೀಮಿಯಂ ಇಂಧನ ಹೆಚ್ಚು ಸೂಕ್ತವಾಗಿದೆ ಎಂದು ತಜ್ಞರು ಹೇಳುತ್ತಾರೆ. ಇಂಡಿಯನ್ ಆಯಿಲ್ ಮಾಹಿತಿಯ ಪ್ರಕಾರ, ಯು ಎಸ್, ಜರ್ಮನಿ ಮತ್ತು ಇತರ ದೇಶಗಳು ಸೇರಿದಂತೆ ಆರು ದೇಶಗಳಲ್ಲಿ ಇಂಧನ ಲಭ್ಯವಿದೆ.
ಓದಿ : ಭಗವದ್ಗೀತೆಯ ಎಲೆಕ್ಟ್ರಾನಿಕ್ ಪ್ರತಿಯೊಂದಿಗೆ ಬಾಹ್ಯಾಕಾಶಕ್ಕೆ ಜಿಗಿದ ಇಸ್ರೋ ರಾಕೆಟ್..!