ನವದೆಹಲಿ:ಭಾರತೀಯ ನೌಕಾಪಡೆ ಮಂಗಳವಾರ(ಡಿಸೆಂಬರ್ 1, 2020) ಬ್ರಹ್ಮೋಸ್ ಸೂಪರ್ ಸಾನಿಕ್ ಮಿಸೈಲ್ ಪರೀಕ್ಷಾರ್ಥ ಉಡ್ಡಯನ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶದಲ್ಲಿ ಯಶಸ್ವಿಯಾಗಿ ನಡೆಸಿರುವುದಾಗಿ ವರದಿ ತಿಳಿಸಿದೆ.
ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಪ್ರಕಾರ, ದೇಶೀಯವಾಗಿ ನಿರ್ಮಾಣಗೊಂಡಿದ್ದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯನ್ನು ಭಾರತೀಯ ನೌಕಾಪಡೆ ಪರೀಕ್ಷಾರ್ಥ ಉಡ್ಡಯನ ಮಾಡಿರುವುದಾಗಿ ಹೇಳಿದೆ.
ಸೇನೆಯ ವಿವಿಧ ರೆಜಿಮೆಂಟ್ ನ ರಕ್ಷಣಾ ಸಂಶೋಧನಾ ಮತ್ತು ಡೆವಲಪ್ ಮೆಂಟ್ ಆರ್ಗನೈಸೇಶನ್ ಈ ಮಿಸೈಲ್ ಅನ್ನು ಅಭಿವೃದ್ಧಿಪಡಿಸಿತ್ತು. ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ 400 ಕಿಲೋ ಮೀಟರ್ ದೂರದವರೆಗೆ ಗುರಿ ಇಟ್ಟು ದಾಳಿ ನಡೆಸಬಹುದಾಗಿದೆ.
ಇದನ್ನೂ ಓದಿ:ಮಂಗಳೂರು ದೋಣಿ ದುರಂತ – ಇಬ್ಬರ ಮೃತದೇಹ ಪತ್ತೆ : ಮುಂದುವರಿದ ಶೋಧ ಕಾರ್ಯ
ಈ ಕ್ಷಿಪಣಿಯನ್ನು ಜಲಾಂತರ್ಗಾಮಿ ನೌಕೆಗಳು, ಹಡಗು, ವಿಮಾನ ಹಾಗೂ ಭೂ ಮೇಲ್ಮೈಯಿಂದಲೂ ಹಾರಿಸಬಹುದಾಗಿದೆ. ನಿಕೋಬಾರ್ ದ್ವೀಪಪ್ರದೇಶ ಸಮೀಪದ ಬಂಗಾಳ ಕೊಲ್ಲಿಯಲ್ಲಿ ನಿಲ್ಲಿಸಿದ್ದ ಹಡಗನ್ನು ಗುರಿಯಾಗಿರಿಸಿಕೊಂಡು ಭಾರತೀಯ ಯುದ್ಧನೌಕೆ ಐಎನ್ ಎಸ್ ರಣ್ ವಿಜಯ್ ನೌಕೆ ಮೇಲಿಂದ ಬ್ರಹ್ಮೋಸ್ ಸೂಪರ್ ಸಾನಿಕ್ ಮಿಸೈಲ್ ಅನ್ನು ಉಡ್ಡಯನ ಮಾಡಿದ್ದು, ನಿಖರವಾಗಿ ತನ್ನ ಗುರಿಯನ್ನು ತಲುಪಿರುವುದಾಗಿ ಮೂಲಗಳು ತಿಳಿಸಿವೆ.