ನವದೆಹಲಿ: ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಶನಿವಾರ ಯಶಸ್ವಿಯಾಗಿ ನೆರವೇರಿಸಲಾಗಿದೆ.
ಈ ಬಗ್ಗೆ ಭಾರತೀಯ ನೌಕಾಪಡೆ ಹೇಳಿಕೆ ಬಿಡುಗಡೆ ಮಾಡಿದ್ದು, “ಬ್ರಹ್ಮೋಸ್ ಸುಧಾರಿತ ಆವೃತ್ತಿಯ ಪರೀಕ್ಷೆ ಇದಾಗಿದೆ.
ದೂರದಲ್ಲಿರುವ ಶತ್ರುವಿನ ನೆಲೆಯನ್ನು ಕರಾರುವಾಕ್ಕಾಗಿ ಛೇದಿಸುವ ಸಾಮರ್ಥ್ಯ ಹೊಸ ಆವೃತ್ತಿಯ ಕ್ಷಿಪಣಿಗೆ ಇದೆ ಎನ್ನುವುದು ಉಡಾವಣೆಯಿಂದ ಸಾಬೀತಾಗಿದೆ’ ಎಂದು ತಿಳಿಸಿದೆ.
ದೇಶದ ಯಾವ ಭಾಗದಲ್ಲಿ ಪರೀಕ್ಷೆ ನಡೆಸಲಾಗಿದೆ ಮತ್ತು ಕ್ಷಿಪಣಿಯ ಸಾಮರ್ಥ್ಯದ ಮಾಹಿತಿಯನ್ನು ನೌಕಾಪಡೆ ಬಹಿರಂಗಪಡಿಸಿಲ್ಲ. ಬ್ರಹ್ಮೋಸ್ ಕ್ಷಿಪಣಿ ಜಗತ್ತಿನ ಅತ್ಯಂತ ಮಾರಕ ಕ್ಷಿಪಣಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಒಡಿಶಾದ ಚಂಡೀಪುರದಿಂದ ಬ್ರಹ್ಮೋಸ್‌ನ ಮತ್ತೊಂದು ಆವೃತ್ತಿಯ ಕ್ಷಿಪಣಿಯ ಪರೀಕ್ಷಾರ್ಥ ಪರೀಕ್ಷೆ ನಡೆಸಿತ್ತು.