ನವದೆಹಲಿ: ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಸುಮಿತ್ರಾ ಮತ್ತೊಂದು ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ ಮತ್ತು ಶಸ್ತ್ರಸಜ್ಜಿತ ಸೊಮಾಲಿ ಕಡಲ್ಗಳ್ಳರು ಸೊಮಾಲಿಯಾದ ಪೂರ್ವ ಕರಾವಳಿಯಲ್ಲಿ ಅಪಹರಿಸಿದ್ದ 19 ಪಾಕಿಸ್ತಾನಿ ಪ್ರಜೆಗಳನ್ನು ಹೊತ್ತ ಹಡಗನ್ನು ರಕ್ಷಿಸಿದೆ.
ಐಎನ್‌ಎಸ್ ಸುಮಿತ್ರಾ ನಡೆಸಿದ ಕಾರ್ಯಾಚರಣೆಯಲ್ಲಿ ಮೀನುಗಾರಿಕಾ ಹಡಗು ಅಲ್ ನಯೀಮಿ ಮೇಲೆ ಸೋಮಾಲಿಯಾ ಕಡಲ್ಗಳ್ಳರು ನಡೆಸಿದ ಪ್ರಯತ್ನವನ್ನು ವಿಫಲಗೊಳಿಸಿತು ಜೊತೆಗೆ 11 ಸೋಮಾಲಿ ಕಡಲ್ಗಳ್ಳರಿಂದ ಬಂದಿಯಾಗಿದ್ದ 19 ಮಂದಿ ಪಾಕಿಸ್ತಾನಿ ಪ್ರಜೆಗಳನ್ನು ರಕ್ಷಿಸಿದೆ ಎಂದು ನೌಕಾಪಡೆಯ ವಕ್ತಾರರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಐಎನ್‌ಎಸ್ ಸುಮಿತ್ರಾ ಸೋಮವಾರ ಸೋಮಾಲಿಯಾದ ಪೂರ್ವ ಕರಾವಳಿ ಮತ್ತು ಏಡನ್ ಕೊಲ್ಲಿಯಲ್ಲಿ ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಯಲ್ಲಿ 17 ಸಿಬ್ಬಂದಿಯನ್ನು ಹೊಂದಿದ್ದ ಇರಾನ್ ಧ್ವಜದ ಮೀನುಗಾರಿಕಾ ಹಡಗು ಇಮಾನ್ ಅನ್ನು ಸೊಮಾಲಿ ಕಡಲ್ಗಳ್ಳರಿಂದ ಸುರಕ್ಷಿತವಾಗಿ ರಕ್ಷಿಸಿದ ನಂತರ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು.
ಅಭಿವೃದ್ಧಿಶೀಲ ಪರಿಸ್ಥಿತಿಗೆ ತ್ವರಿತವಾಗಿ ಪ್ರತಿಕ್ರಿಯಿಸಿದ ಐಎನ್‌ಎಸ್ ಸುಮಿತ್ರಾ ಸೋಮವಾರ ಅಲ್ ನಯೀಮಿಯನ್ನು ಸೊಮಾಲಿಯಾ ಕಡಲ್ಗಳ್ಳರು ವಶಕ್ಕೆ ಪಡೆದ ಕೆಲವೇ ಹೊತ್ತಿನಲ್ಲಿ ಹಡಗನ್ನು ಸುತ್ತುವರೆದು ಸೊಮಾಲಿಯಾ ಕಡಲ್ಗಳ್ಳರನ್ನು ವಶಕ್ಕೆ ಪಡೆಯುವ ಮೂಲಕ ಸೊಮಾಲಿಯಾ ಕಡಲ್ಗಳ್ಳರ ವಶದಲ್ಲಿದ್ದ ಪಾಕಿಸ್ಥಾನದ ನಾವಿಕರನ್ನು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: MBA Student: ಸುತ್ತಿಗೆಯಿಂದ 50 ಬಾರಿ ಹೊಡೆದು ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯ ಹತ್ಯೆ