Advertisement

ಸಬ್‌ಮರಿನ್‌ಗಳಲ್ಲಿ ಸ್ತ್ರೀಯರಿಗೂ ಅವಕಾಶ! ಅಗ್ನಿಪಥದ ಮೂಲಕ ತೆರೆದ ಬಾಗಿಲು

11:14 AM Jul 06, 2022 | Team Udayavani |

ನವದೆಹಲಿ: ಭಾರತೀಯ ನೌಕಾಪಡೆಯಲ್ಲಿ ಸಬ್‌ಮರಿನ್‌ಗಳನ್ನು ಬಳಸುವುದು ನಿಮಗೆ ಗೊತ್ತೇ ಇದೆ. ಆದರೆ ಇಲ್ಲಿ ಮಹಿಳೆಯರು ಇದುವರೆಗೆ ಕಾರ್ಯ ನಿರ್ವಹಿಸಿಲ್ಲ ಎನ್ನುವುದು ಗೊತ್ತೇ?

Advertisement

ಈಗ ಅಗ್ನಿಪಥ ಮೂಲಕ ಮಾಡಿಕೊಳ್ಳುವ ನೇಮಕಾತಿಯಲ್ಲಿ ಮಹಿಳೆಯರೂ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು! ನೌಕಾ ಸೇನೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ನೌಕಾಪಡೆಯಲ್ಲಿ ಲಭ್ಯವಿರುವ ಎಲ್ಲ ಹುದ್ದೆಗಳಿಗೆ ಮಹಿಳೆಯರೂ ಅರ್ಜಿ ಸಲ್ಲಿಸಬಹುದು. ಕನಿಷ್ಠ ಶೇ.20 ಮಹಿಳೆಯರಿಗೆ ಅವಕಾಶ ನೀಡುವ ತೀರ್ಮಾನ ಮಾಡಲಾಗಿದೆ.

ಸಾಮಾನ್ಯವಾಗಿ ಯುದ್ಧ ನೌಕೆಗಳು ವಿಶಾಲವಾಗಿರುತ್ತವೆ. ಅಲ್ಲಿ ಮಹಿಳೆಯರಿಗೆ ಅನುಕೂಲಗಳು ಹೆಚ್ಚಿರುತ್ತವೆ. ಅಲ್ಲಿ ಕೆಲಸ ಮಾಡಬಹುದು. ಆದರೆ ಸಬ್‌ಮರಿನ್‌ಗಳಲ್ಲಿ ಇರಲು ಬಹಳ ಕಡಿಮೆ ಜಾಗವಿರುತ್ತದೆ. ಹಾಗಾಗಿ ಮಹಿಳೆಯರನ್ನು ನೇಮಿಸಿಕೊಳ್ಳುತ್ತಿರಲಿಲ್ಲ. ಇದೀಗ ಎಲ್ಲ ವಿಭಾಗಗಳಲ್ಲೂ ಮಹಿಳೆಯರು ಅರ್ಜಿ ಸಲ್ಲಿಸಬಹುದು ಎಂಬ ಪ್ರಕಟಣೆ ನೋಡಿದಾಗ ಜಲಾಂತರ್ಗಾಮಿಗಳ ಬಾಗಿಲು ಮಹಿಳೆಯರಿಗೆ ತೆರೆದಿದೆಯೆಂದು ಹೇಳಬಹುದು.

ಹಾಗಂತ ಈಗಲೇ ಮಹಿಳೆಯರು ಈ ಹುದ್ದೆಗೆ ಸೇರಿಕೊಳ್ಳುತ್ತಾರೆಂದು ಅಂದುಕೊಳ್ಳುವ ಅಗತ್ಯವಿಲ್ಲ. ಇದೀಗ ಬಾಗಿಲು ತೆರೆದಿರುವುದರಿಂದ ಕಾಲಕ್ರಮೇಣ ಇಲ್ಲೂ ಒಂದಷ್ಟು ಮಹಿಳೆಯರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಈಗಾಗಲೇ ಯುದ್ಧ ವಿಮಾನಗಳಲ್ಲಿ ಮಹಿಳಾ ಪೈಲಟ್‌ಗಳು ಇದ್ದಾರೆ, ಸೇನೆಯಲ್ಲೂ ಮಹಿಳೆಯರಿಗೆ ಮುಖ್ಯ ಹುದ್ದೆಗಳು ಸಿಗುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next