Advertisement

2047ರ ವೇಳೆಗೆ ಭಾರತೀಯ ನೌಕಾಪಡೆ ಸಂಪೂರ್ಣ ಸ್ವಾವಲಂಬಿ: ನೌಕಾಪಡೆ ಮುಖ್ಯಸ್ಥ

05:43 PM Dec 03, 2022 | Team Udayavani |

ನವದೆಹಲಿ: ಭಾರತೀಯ ನೌಕಾಪಡೆಯು 2047 ರ ವೇಳೆಗೆ ‘ಆತ್ಮನಿರ್ಭರ್’ (ಸ್ವಾವಲಂಬಿ) ಆಗಲಿದೆ ಎಂದು ಸರ್ಕಾರಕ್ಕೆ ಭರವಸೆ ನೀಡುವುದಾಗಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ಶನಿವಾರ ಹೇಳಿದ್ದಾರೆ.

Advertisement

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನದ ವಿವಿಧ ಮಿಲಿಟರಿ ಮತ್ತು ಸಂಶೋಧನಾ ಹಡಗುಗಳ ಚಲನವಲನಗಳ ಮೇಲೆ ನೌಕಾಪಡೆಯು ತೀವ್ರ ನಿಗಾ ಇರಿಸುತ್ತದೆ ಎಂದು ಹೇಳಿದರು.

ಕಳೆದ ಒಂದು ವರ್ಷದಲ್ಲಿ ಭಾರತೀಯ ನೌಕಾಪಡೆಯು ಅತ್ಯಂತ ಹೆಚ್ಚಿನ ಕಾರ್ಯಾಚರಣೆಯ ವೇಗವನ್ನು ಸಾಧಿಸಿದ್ದು, ಇದರ ಜೊತೆಗೆ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ:ಕಬ್ಬಿನಾಲೆಯ ಪ್ರಕೃತಿ ಸೌಂದರ್ಯಯಕ್ಕೆ ಮತ್ತೊಂದು ಹೆಸರೇ ‘ಮತ್ತಾವು ಜಲಪಾತ’…

ಆತ್ಮನಿರ್ಭರ್ ಭಾರತ್ ಕುರಿತು ಸರ್ಕಾರವು ನಮಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದೆ. 2047 ರ ವೇಳೆಗೆ ಭಾರತೀಯ ನೌಕಾಪಡೆಯು ಆತ್ಮನಿರ್ಭರ್ ಆಗಲಿದೆ ಎಂದು ನಾವು ಭರವಸೆ ನೀಡಿದ್ದೇವೆ ಎಂದು ನೌಕಾಪಡೆಯ ಮುಖ್ಯಸ್ಥರು ಹೇಳಿದರು.

Advertisement

ಅಗ್ನಿವೀರ್‌ ಯೋಜನೆಯಡಿಯಲ್ಲಿ ಭಾರತೀಯ ನೌಕಾಪಡೆಗೆ ಸುಮಾರು 3,000 ಅಗ್ನಿವೀರ್‌ಗಳು ಆಗಮಿಸಿದ್ದು, ಅವರಲ್ಲಿ 341 ಮಹಿಳೆಯರನ್ನು ಮೊದಲ ಬಾರಿಗೆ ನಾವು ಮಹಿಳಾ ನಾವಿಕರನ್ನು ಸೇರ್ಪಡೆಗೊಳಿಸುತ್ತಿದ್ದೇವೆ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next