Advertisement

ಅಮೆರಿಕದಲ್ಲಿ ಭಾರತೀಯ ತಾಯಿ, ಮಗ ನಿಗೂಢ ಸಾವು

11:13 PM Mar 24, 2017 | Team Udayavani |

ವಿಜಯವಾಡ: ಅಮೆರಿಕದಲ್ಲಿ ಭಾರತೀಯರ ಹತ್ಯೆ ನಿಲ್ಲುವ ಹಾಗೆ ಕಾಣುತ್ತಿಲ್ಲ. ನ್ಯೂಜೆರ್ಸಿಯಲ್ಲಿ ತಾಯಿ ಮತ್ತು 7 ವರ್ಷದ ಮಗ ಮನೆಯಲ್ಲಿ ನಿಗೂಢ ಸಾವನ್ನಪ್ಪಿದ ಘಟನೆ ನಡೆದಿದೆ. ವರ್ಕ್‌ ಫ್ರಂ ಹೋಮ್‌ ಕೆಲಸ ಮಾಡುತ್ತಿದ್ದ ಸಾಫ್ಟ್ವೇರ್‌ ಎಂಜಿನಿಯರ್‌ ಎನ್‌. ಶಶಿಕಲಾ (40), ಅವರ ಮಗ ಅನಿಶ್‌ ಸಾಯಿ ಮೃತರು. ಆಂಧ್ರಪ್ರದೇಶ ಮೂಲದ ಎನ್‌. ಹನುಮಂತರಾವ್‌ ಕಚೇರಿ ಕೆಲಸ ಮುಗಿಸಿ ಸಂಜೆ ವಾಪಸಾದಾಗ, ಪತ್ನಿ ಹಾಗೂ ಮಗನ ಮೃತದೇಹ ಕಂಡಿದೆ. ವಿಜಯವಾಡದಲ್ಲಿನ ಶಶಿಕಲಾ ತಾಯಿ, “ಇದು ದ್ವೇಷಪೂರಿತ ಕೊಲೆ. ತನಿಖೆಯಾಗಲಿ’ ಎಂದು ಅಮೆರಿಕ ಸರಕಾರವನ್ನು ಆಗ್ರಹಿಸಿದ್ದಾರೆ. ಇತ್ತೀಚೆಗಷ್ಟೇ ಟೆಕ್ಕಿ ಶ್ರೀನಿವಾಸ್‌ ಕುಚಿಭೋಟ್ಲಾ, ವಂಶಿರೆಡ್ಡಿ ಮಮಿದಾಲ ಅವರನ್ನು ಅಮೆರಿಕದಲ್ಲಿ ಹತ್ಯೆ ಮಾಡಲಾಗಿತ್ತು.

Advertisement

ಮೋದಿ ಮಧ್ಯಪ್ರವೇಶಕ್ಕೆ ಆಗ್ರಹ: ಅಮೆರಿಕದಲ್ಲಿ ತಾಯಿ ಮತ್ತು ಮಗನ ನಿಗೂಢ ಸಾವಿನ ಬಗ್ಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಶುಕ್ರವಾರ ತೀವ್ರ ಚರ್ಚೆ ನಡೆಯಿತು. ಈ ಸಂಬಂಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next