Advertisement
ಬಂದ್‌ಗೆ ವ್ಯಾಪಕ ಬೆಂಬಲಉಡುಪಿ ಜಿಲ್ಲೆಯಲ್ಲಿ ಒಟ್ಟು 24ಕ್ಕೂ ಅಧಿಕ ಖಾಸಗಿ ಆಸ್ಪತ್ರಗಳಿವೆ. ನಗರದ ಮಿಷನ್ ಆಸ್ಪತ್ರೆ, ಡಾ| ಟಿಎಂಎ ಪೈ, ಹೈಟೆಕ್, ಪ್ರಸಾದ್ ನೇತ್ರಾಲಯ, ಮಣಿಪಾಲ ಕಸ್ತೂರ್ಬಾ, ಉಡುಪಿಯ ಆದರ್ಶ, ಮಿತ್ರ, ದೊಡ್ಡಣಗುಡ್ಡೆಯ ಡಾ| ಎ.ವಿ. ಬಾಳಿಗಾ ಸೇರಿದಂತೆ ಎಲ್ಲ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್‌ಗಳಲ್ಲಿ ಹೊರ ರೋಗಿಗಳ ವಿಭಾಗ ಸೋಮವಾರ ಬೆಳಗ್ಗೆಯಿಂದ ಮುಚ್ಚಿತ್ತು. ಅನಿವಾರ್ಯ ಹಾಗೂ ತುರ್ತು ಚಿಕಿತ್ಸೆಗಳನ್ನು ಮಾಡಲಾ ಗುತ್ತಿತ್ತು.
ನಗರದಲ್ಲಿ ಸುಮಾರು 100 ಕ್ಲಿನಿಕ್‌ಗಳಿವೆ. ಮುಷ್ಕರದ ನಿಮಿತ್ತ ಎಲ್ಲ ವೈದ್ಯರು ವೈದ್ಯಕೀಯ ಸೇವೆಯನ್ನು ಸ್ಥಗಿತಗೊಳಿಸಿದರು. ಸಾಮಾನ್ಯವಾಗಿ ವೈದ್ಯರ ಮುಷ್ಕರದ ಸಂದರ್ಭ ಕ್ಲಿನಿಕ್ ತೆರೆದಿರುತ್ತದೆ. ಇದೇ ಮೊದಲ ಬಾರಿ ನಗರದ ಎಲ್ಲ ಕ್ಲಿನಿಕ್‌ಗಳಲ್ಲಿ ಒಪಿಡಿ ಸೇವೆ ಬಂದ್ ಮಾಡಲಾಯಿತು. ಖಾಸಗಿ ಆಸ್ಪತ್ರೆ ಮುಂಭಾಗದಲ್ಲಿ ಒಪಿಡಿ ಸೇವೆ ಬಂದ್ ಆಗಿರುವ ಕುರಿತು ಬಿತ್ತಿ ಪತ್ರ ಅಂಟಿಸಲಾಗಿತ್ತು. ತಾಲೂಕಿನಲ್ಲಿ ಬೆಂಬಲ
ಉಡುಪಿ ತಾಲೂಕಿನ ಎಲ್ಲ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳು ಮುಷ್ಕರಕ್ಕೆ ಬೆಂಬಲ ನೀಡಿವೆ. ತುರ್ತು ಚಿಕಿತ್ಸೆ ವಿಭಾಗ ಎಂದಿನಂತೆ ಕಾರ್ಯಚರಿಸಿದೆ. ಪಶ್ಚಿಮ ಬಂಗಾಲದ ಸಿಎಂ ಮಮತಾ ಬ್ಯಾನರ್ಜಿ ಜತೆಗಿನ ಚರ್ಚೆಯ ಬಳಿಕ ಜೂ.18ಕ್ಕೆ ಮುಷ್ಕರ ನಡೆಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ| ಗುರುಮೂರ್ತಿ ತಿಳಿಸಿದರು.
Related Articles
15 ದಿನಗಳ ಹಿಂದೆ ಕೈ ಮೊಳೆ ಮುರಿತಕ್ಕೆ ಒಳಗಾದ ವೈದ್ಯರು ಪಟ್ಟಿಯನ್ನು ಹಾಕಿ ಜೂ. 17ರಂದು ಬರುವಂತೆ ಸೂಚಿಸಿದ್ದಾರೆ. ಅಂತೆಯೇ ವೈದ್ಯರ ಮುಷ್ಕರವಾದರೂ ಕೈಗೆ ಹಾಕಿರುವ ಪಟ್ಟಿ ತೆಗೆಯಬಹುದು ಅಂತ ಬಂದಿದ್ದೇನೆ. ಆದರೆ ಆಸ್ಪತ್ರೆಯಲ್ಲಿ ತುರ್ತು ಸೇವೆ ಬಿಟ್ಟು ಇತರೆ ಒಪಿಡಿ ಸೇವೆ ನೀಡಲು ಸಿಬಂದಿಗಳು ಒಪ್ಪುತ್ತಿಲ್ಲ ಎಂದು ಹೆಬ್ರಿ ನಿವಾಸಿ ಮಹೇಶ್ ಶೆಟ್ಟಿ ಬೇಸರ ವ್ಯಕ್ತಪಡಿಸಿದರು
Advertisement