Advertisement

ಭಾರತೀಯ ಮನು ಈಗ ಐಸಿಸಿ ಸಿಇಒ

09:59 PM Apr 01, 2019 | Sriram |

ದುಬೈ: ಭಾರತೀಯ ಮೂಲದ ಮನು ಸಾಹ್ನಿ, ಐಸಿಸಿಯ (ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ) ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

Advertisement

ಅವರು ಸದ್ಯ ಆ ಸ್ಥಾನದಲ್ಲಿರುವ ದ.ಆಫ್ರಿಕಾದ ಡೇವಿಡ್‌ ರಿಚಡ್ಸನ್‌ರೊಂದಿಗೆ ಕಾರ್ಯ ನಿರ್ವಹಿಸಲಿದ್ದಾರೆ. ಡೇವಿಡ್‌, ಇಂಗ್ಲೆಂಡ್‌ ವಿಶ್ವಕಪ್‌ ನಂತರ ಅಂದರೆ ಜುಲೈ ತಿಂಗಳಲ್ಲಿ ತಮ್ಮ ಅವಧಿಯನ್ನು ಮುಗಿಸಲಿದ್ದಾರೆ. ಅನಂತರ ಪೂರ್ಣ ಪ್ರಮಾಣದಲ್ಲಿ ಸಾಹ್ನಿ ಹೊಣೆ ಹೊತ್ತುಕೊಳ್ಳಲಿದ್ದಾರೆ. ಈ ಬೆಳವಣಿಗೆಯೊಂದಿಗೆ, ಐಸಿಸಿಯ ಮುಖ್ಯಸ್ಥ ಮತ್ತು ಸಿಇಒ ಎರಡರಲ್ಲೂ ಭಾರತೀಯರೇ ಇರುವ ಅಪರೂಪದ ವಿದ್ಯಮಾನವೊಂದು ನಡೆದಿದೆ.

ಮಹಾರಾಷ್ಟ್ರ ರಾಜ್ಯದ ನಾಗಪುರದ ಶಶಾಂಕ್‌ ಮನೋಹರ್‌, 2015ರಿಂದ ಐಸಿಸಿ ಅಧ್ಯಕ್ಷ, ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಮುಂದೆ ಅವರ ಸಹಕಾರಿಯಾಗಿ ಸಾಹ್ನಿ ಇರಲಿದ್ದಾರೆ. ಇದುವರೆಗೆ ಸಾಹ್ನಿ ಹಲವು ಮಹತ್ವದ ಜಾಗತಿಕ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಮ್ಯಾಂಚೆಸ್ಟರ್‌ ಯುನೈಟೆಡ್‌ ಫ‌ುಟ್‌ಬಾಲ್‌ ತಂಡದ ಸ್ವತಂತ್ರ ನಿರ್ದೇಶಕರಾಗಿದ್ದ ಅವರು, ಅದಕ್ಕೂ ಮುನ್ನ ಇಎಸ್‌ಪಿಎನ್‌ ಸ್ಟಾರ್‌ನ್ಪೋರ್ಟ್ಸ್ ಕ್ರೀಡಾ ವಾಹಿನಿಯ ಏಷ್ಯಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅವರ ಅವಧಿಯಲ್ಲೇ ಸ್ಟಾರ್‌ ವಾಹಿನಿ, ಐಸಿಸಿಯೊಂದಿಗೆ ಜಾಗತಿಕ ನೇರಪ್ರಸಾರದ ಬೃಹತ್‌ ಒಪ್ಪಂದ ಮಾಡಿಕೊಂಡಿತ್ತು. ಸಾಹ್ನಿ ಅವರು ರಾಜಸ್ಥಾನದ ಪಿಲಾನಿಯಲ್ಲಿರುವ ಬಿರ್ಲಾ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಆ್ಯಂಡ್‌ ಸೈನ್ಸ್‌ ಸಂಸ್ಥೆಯಲ್ಲಿ ಪದವೀಧರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next