Advertisement
ತಟ್ಟನೆ ಬರುವ ಮೊದಲ ಆಲೋಚನೆ ಎಂದರೆ ನಿಧಿಯನ್ನು ಎತ್ತಿಕೊಂಡು ಮನೆಯ ಕಡೆ ಹೆಜ್ಜೆ ಹಾಕುತ್ತಾನೆ ಎಂಬುದು. ಆದರೆ ದುಬೈನಲ್ಲಿ ನೆಲೆಸಿರುವ ಭಾರತೀಯ ವಲಸಿಗ ರಿತೇಶ್ ಜೇಮ್ಸ್ ಗುಪ್ತಾ ಅವರು ಹಾಗೆ ಮಾಡಿಲ್ಲ.
Related Articles
Advertisement
ಎಲ್ಲಿತ್ತು ಚೀಲದುಬೈನಲ್ಲಿ ವಾಸಿಸುತ್ತಿರುವ ಗುಪ್ತಾ, ಅವರ ಪತ್ನಿ ಅಪರೂಪಾ ಗಂಗೂಲಿ ಮತ್ತು ಅವರ ಮೂರು ವರ್ಷದ ಮಗ ವಿವಾನ್ ಐಡೆನ್ ಗುಪ್ತಾ ಅವರೊಂದಿಗೆ ರಾತ್ರಿ 10.30ರ ಸುಮಾರಿಗೆ ಮೆಟ್ರೋ ನಿಲ್ದಾಣದ ಬಳಿಯ ಅಲ್ ಕುಸೈಸ್‌ನ ಸಲೂನೆಗೆ ಭೇಟಿ ನೀಡಿದ್ದರು. ಬಳಿಕ ಹಿಂತಿರುಗಿದಾಗ ತನ್ನ ಕಾರ್‌ನ ಬಾನೆಟ್‌ನಲ್ಲಿ ಚೀಲ ಇರುವುದು ಪತ್ತೆಯಾಗಿದೆ. ಅದನ್ನು ಕಂಡು ಗೊಂದಲಕ್ಕೊಳಗಾಗಿದ್ದನು. ಅದನ್ನು ಏನು ಮಾಡಬೇಕೆಂದು ತಿಳಿಯದೇ ಚೀಲದ ವಾರಸುದಾರರು ಯಾರಾದರೂ ಬಂದು ಚೀಲವನ್ನು ಕೊಂಡುಹೋಗುತ್ತಾರೆಯೇ ಎಂದು ಸುಮಾರು 30 ನಿಮಿಷಗಳ ಕಾಲ ಕಾಯುತ್ತಿದ್ದರು. ಆದರೆ ಯಾರ ಸುಳಿವೂ ಇರಲಿಲ್ಲ. ನಂತರ ಅವರು ಯಾವುದೇ ಗುರುತು ಅಥವಾ ಸಂಪರ್ಕ ವಿವರಗಳನ್ನು ಪರೀಕ್ಷಿಸುವ ಕಾರಣಕ್ಕೆ ಚೀಲವನ್ನು ತೆರೆಯಲು ನಿರ್ಧರಿಸಿದ್ದರು. ಆದರೆ ಚೀಲದ ಒಳಗೆ ಏನಿದೆ ಎಂದು ನೋಡಿ ಬೆರಗಾದರು. ಯುಎಸ್ ಡಾಲರ್‌ಗಳ ಹಲವು ನೋಟುಗಳ ಸಂಗ್ರಹಗಳು ಮತ್ತು ಬಹಳಷ್ಟು ಚಿನ್ನಾಭರಣಗಳು, ಮೂರು ಅಮೆರಿಕನ್ ಪಾಸ್‌ಪೋರ್ಟ್‌ಗಳು ಇದ್ದವು.
ಚೀಲದ ಮಾಲೀಕರನ್ನು ಹೇಗೆ ಪತ್ತೆ ಹಚ್ಚುವುದಿ ಎಂಬುದು ನನಗೆ ಹೊಳೆದೇ ಇಲ್ಲ. ಆದರೆ ಹೆಂಡತಿ ತಕ್ಷಣವೇ ಪೊಲೀಸರ ಬಳಿಗೆ ಹೋಗಬೇಕೆಂದು ಹೇಳಿದಳು. “ದೇವರು ಈ ಕಷ್ಟದ ಸಮಯದಲ್ಲಿ ನಮ್ಮನ್ನು ಪರೀಕ್ಷಿಸುತ್ತಿದ್ದಾನೆ. ಆದ್ದರಿಂದ ಅದನ್ನು ಹಿಂದಿರುಗಿಸಲು ವಿಫಲರಾಗಬೇಡಿ ‘ ಎಂದು ಪತ್ನಿ ಹೇಳಿದ್ದಾಗಿ ಗುಪ್ತಾ ಮಾಹಿತಿ ನೀಡಿದ್ದಾರೆ. ಮರುದಿನ, ಗುಪ್ತಾ ಅವರಿಗೆ ಚೀಲದ ಮಾಲಕರಿಂದ ಕರೆ ಬಂತು. ಅವನ ಹೆಸರು ಬಾಬಿ ಹಮೀದ್, ಬಾಂಗ್ಲಾದೇಶದ ಅಮೆರಿಕನ್. ಹಮೀದ್ ಅವರು ಗುಪ್ತಾ ಅವರಿಗೆ ಕರೆ ಮಾಡಿ ಉತ್ತಮ ನಡೆ ಮತ್ತು ಪ್ರಾಮಾಣಿಕತೆಗಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಆದರೆ ಬ್ಯಾಗಿನ ವಾರಸುದಾರರು ಅಮೆರಿಕಕ್ಕೆ ಹಿಂದಿರುಗಿಯಾಗಿತ್ತು. ಕಳೆದ 45 ವರ್ಷಗಳಿಂದ ಇಲ್ಲಿ ವಾಸವಾಗಿರುವ ತನ್ನ ಹೆತ್ತವರನ್ನು ಭೇಟಿ ಮಾಡಲು ಅವರು ಕುಟುಂಬದೊಂದಿಗೆ ದುಬೈಗೆ ಬಂದಿದ್ದರು. ಹೀಗಾಗಿ ಅವರನ್ನು ಭೇಟಿಯಾಗಲು ಗುಪ್ತಾ ಅವರಿಗೆ ಸಾಧ್ಯವಾಗಿಲ್ಲ. ಗುಪ್ತಾರಿಗೆ ಉದ್ಯೋಗವೂ ದೊರೆಯಿತು
ಇಷ್ಟೆಲ್ಲಾ ಪ್ರಾಮಾಣಿಕ ಕಾರ್ಯಗಳು ನಡೆದ ಕೆಲವು ದಿನಗಳ ಬಳಿಕ ಗುಪ್ತಾ ಅವರಿಗೆ ಬ್ಯಾಂಕಿನಿಂದ ಹೊಸ ಉದ್ಯೋಗ ಪ್ರಸ್ತಾವ ಬಂದಿದೆ.ಈ ವೇಳೆ ಅವರ ಸಂಭ್ರಮವು ದ್ವಿಗುಣಗೊಂಡಿತು. “ಕಷ್ಟದ ಸಮಯದಲ್ಲಿ ಇದು ದೇವರಿಂದ ನನಗೆ ದೊರೆತ ಪ್ರತಿಫಲ ಎಂದು ನಾನು ನಂಬುತ್ತೇನೆ. ಏಕೆಂದರೆ ನನಗೆ ಉತ್ತಮ ಉದ್ಯೋಗದ ಪ್ರಸ್ತಾವ ಸಿಕ್ಕಿದೆ. ನನ್ನ ಕುಟುಂಬ ಮತ್ತು ಸ್ನೇಹಿತರು ನನ್ನ ಬಗ್ಗೆ ಹೆಮ್ಮೆಪಡುವಾಗ ನಾನು ಸಂತೋಷವನ್ನು ಅನುಭವಿಸುತ್ತೇನೆ. ಭಾರತದಿಂದ ನನ್ನ ಸ್ನೇಹಿತರು ಮತ್ತು ಸಂಬಂಧಿಕರಿಂದ ನನಗೆ ಕರೆಗಳು ಬರುತ್ತಿವೆ. ನನ್ನ ಪ್ರಾಮಾಣಿಕತೆಗೆ ಅಭಿನಂದನೆಗಳು ಎಂದರು ಗುಪ್ತಾ ಅವರು. ಅಲ್ ಖುಸೈಸ್ ಪೊಲೀಸ್ ಠಾಣೆಯ ನಿರ್ದೇಶಕ ಬ್ರಿಗೇಡಿಯರ್ ಯೂಸೆಫ್ ಅಬ್ದುಲ್ಲಾ ಸಲೀಮ್ ಅಲ್ ಅಡಿಡಿ ಗುಪ್ತಾ ಅವರಿಗೆ ಮೆಚ್ಚುಗೆಯ ಪ್ರಮಾಣಪತ್ರ ನೀಡಿ ಗೌರವಿಸಿದ್ದಾರೆ. ದುಬೈ ಪೊಲೀಸರಿಂದ ಇಷ್ಟು ದೊಡ್ಡ ಮನ್ನಣೆ ಪಡೆದ ನಂತರ ಗುಪ್ತಾ ಅವರ ಸಂತೋಷಕ್ಕೆ ಯಾವುದೇ ಮಿತಿಯಿರಲಿಲ್ಲ. ಇಂತಹ ಪ್ರಾಮಾಣಿಕ ವ್ಯಕ್ತಿಯನ್ನು ಗೌರವಿಸುವ ಅವಕಾಶವನ್ನು ದುಬೈ ಪೊಲೀಸರೂ ಕಳೆದುಕೊಳ್ಳಲಿಲ್ಲ.