Advertisement

ಜೂಡೋಪಟು ಎಲ್‌. ಸುಶೀಲಾದೇವಿಗೆ ರಜತ ಪದಕ

11:11 PM Aug 01, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಜೂಡೋಪಟು ಎಲ್‌. ಸುಶೀಲಾದೇವಿ 48 ಕೆಜಿ ವಿಭಾಗದಲ್ಲಿ ರಜತ ಪದಕ ಗೆದ್ದು ಸಂಭ್ರಮಿಸಿದರು.

Advertisement

ಸೋಮವಾರದ ಫೈನಲ್‌ನಲ್ಲಿ ಅವರು ದಕ್ಷಿಣ ಆಫ್ರಿಕಾ ಎದುರಾಳಿ ವಿರುದ್ಧ ಸೋಲನುಭವಿಸಿ ಚಿನ್ನದ ಪದಕದಿಂದ ವಂಚಿತರಾದರು. ಇದು ಈ ಬಾರಿಯ ಗೇಮ್ಸ್‌ನಲ್ಲಿ ಭಾರತಕ್ಕೆ ಒಲಿದ 7ನೇ ಪದಕ.

ಮಣಿಪುರದ ಪೊಲೀಸ್‌ ವಿಭಾಗದಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಆಗಿರುವ 27 ವರ್ಷದ ಸುಶೀಲಾದೇವಿ ಸೋಮವಾರ ಒಂದೇ ದಿನ 3 ಸ್ಪರ್ಧೆಗಳಲ್ಲಿ ಕಾಣಿಸಿಕೊಂಡರು. ದಿನದ ಮೊದಲ ಪಂದ್ಯದಲ್ಲಿ ಮಲಾವಿಯ ಹ್ಯಾರೀಟ್‌ ಬಾನ್‌ಫೇಸ್‌ ಅವರನ್ನು ಮಣಿಸುವ ಮೂಲಕ ಸೆಮಿಫೈನಲ್‌ ತಲುಪಿದರು. ಅಲ್ಲಿ ಮಾರಿಶಿಯಸ್‌ನ ಪ್ರಿಸ್ಕಿಲ್ಲಾ ಮೊರಾಂಡ್‌ ಅವರನ್ನು ಪರಾಭವಗೊಳಿಸಿದರು.

ವಿಜಯ್‌ ಕುಮಾರ್‌ಗೆ ಕಂಚು
ಪುರುಷರ 60 ಕೆಜಿ ವಿಭಾಗದ ರೆಪಿಶೇಜ್‌ ಸುತ್ತಿನಲ್ಲಿ ವಿಜಯ್‌ ಕುಮಾರ್‌ ಯಾದವ್‌ ಭರ್ಜರಿ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದ‌ರು. ಇಲ್ಲಿ ಅವರ ಎದುರಾಳಿ ಆಗಿದ್ದವರು ಸೈಪ್ರಸ್‌ನ ಪೆಟ್ರೋಸ್‌ ಕ್ರಿಸ್ಟೋಡುಲೈಡ್ಸ್‌.

66 ಕೆಜಿ ಸೆಮಿಫೈನಲ್‌ನಲ್ಲಿ ಸ್ಕಾಟ್ಲೆಂಡ್‌ನ‌ ಫಿನ್ಲ ಅಲನ್‌ ವಿರುದ್ಧ ಪರಾಭವಗೊಂಡ ಜಸ್ಲಿàನ್‌ ಸಿಂಗ್‌ ಸೈನಿ ಕೂಡ ಕಂಚಿನ ಪದಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next