Advertisement

ಹಿರಿಯ ಪತ್ರಕರ್ತ ರವೀಶ್‌ ಕುಮಾರ್‌ ಗೆ ರಾಮನ್‌ ಮ್ಯಾಗ್ಸಸ್ಸೆ ಪ್ರಶಸ್ತಿ

09:55 AM Aug 03, 2019 | keerthan |

ಹೊಸದಿಲ್ಲಿ; ಹಿರಿಯ ಪತ್ರಕರ್ತ ರವೀಶ್‌ ಕುಮಾರ್‌ ಅವರಿಗೆ 2019ರ ಸಾಲಿನ ಪ್ರತಿಷ್ಠಿತ ರಾಮನ್‌ ಮ್ಯಾಗ್ಸಸ್ಸೆ ಪ್ರಶಸ್ತಿ ಲಭಿಸಿದೆ.

Advertisement

ರವೀಶ್‌ ಕುಮಾರ್‌ ಎನ್‌ ಡಿಟಿ ಇಂಡಿಯಾ ವಾಹಿನಿಯ ಹಿರಿಯ ಕಾರ್ಯಕಾರಿ ಸಂಪಾದಕರಾಗಿದ್ದು, ಭಾರತದ ಅತ್ಯಂತ ಪ್ರಭಾವಿ ಟಿವಿ ಪತ್ರಕರ್ತರಾಗಿದ್ದಾರೆ ಎಂದು ಪ್ರಶಸ್ತಿ ಸಮಿತಿ ಹೇಳಿದೆ.

44 ವರ್ಷದ ರವೀಶ್‌ ಕುಮಾರ್‌ ಅವರು ಧ್ವನಿಯಿಲ್ಲದವರಿಗೆ ಧ್ವನಿಯಾಗಿದ್ದಾರೆ. ಸಾಮಾನ್ಯ ಜನರ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ ಎಂದು ಪ್ರಶಸ್ತಿ ಸಮಿತಿ ಹೇಳಿದೆ. ಏಷ್ಯಾ ಖಂಡದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಸಾಧಕರಿಗೆ ರೋಮನ್‌ ಮ್ಯಾಗ್ಸಸ್ಸೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭ ಸೆಪ್ಟೆಂಬರ್‌ 9ರಂದು ಮನಿಲಾದಲ್ಲಿ ನಡೆಯಲಿದೆ.

ಭಾರತೀಯ ರವೀಶ್‌ ಕುಮಾರ್‌ ಜೊತೆ  ಮಾಯನ್ಮಾರ್‌ ನ‌ ಪತ್ರಕರ್ತ ಕೊ ಸ್ವೆ ವಿನ್, ಥೈಲ್ಯಾಂಡ್‌ ನ ಮಾನವ ಹಕ್ಕುಗಳ ಕಾರ್ಯಕರ್ತ ಆಂಖಾನ ನೀಲಪಜಿತ್‌, ಫಿಲಿಫೈನ್ಸ್‌ ನ ರಾಯಮುಂಡೋ ಪುಜಂಟೆ, ದಕ್ಷಿಣ ಕೊರಿಯಾದ ಕಿಮ್‌ ಜಾಂಗ್‌ ಕಿ ಅವರಿಗೆ ಈ ಸಾಲಿನ ಮ್ಯಾಗ್ಸಸ್ಸೆ ಪ್ರಶಸ್ತಿ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next