Advertisement

Dubai ಬಸ್ ಅಪಘಾತದಲ್ಲಿ ಗಾಯಗೊಂಡ ಭಾರತೀಯನಿಗೆ 11 ಕೋಟಿ ರೂ. ಪರಿಹಾರ

09:11 AM Apr 07, 2023 | Team Udayavani |

ದುಬೈ: 12 ಭಾರತೀಯರು ಸೇರಿದಂತೆ 17 ಜನರ ಸಾವಿಗೆ ಕಾರಣವಾದ 2019 ರ ಬಸ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಭಾರತೀಯ ವ್ಯಕ್ತಿಗೆ 5 ಮಿಲಿಯನ್ (₹ 11 ಕೋಟಿಗೂ ಹೆಚ್ಚು) ಪರಿಹಾರವನ್ನು ನೀಡಲಾಗಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

Advertisement

20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಮುಹಮ್ಮದ್ ಬೇಗ್ ಮಿರ್ಜಾ ಅವರು ಒಮಾನ್‌ ನಿಂದ ಯುಎಇಗೆ ಪ್ರಯಾಣಿಸುತ್ತಿದ್ದ ಬಸ್ ದುಬೈನಲ್ಲಿ ಅಪಘಾತಕ್ಕೀಡಾಗಿತ್ತು, 31 ಪ್ರಯಾಣಿಕರಲ್ಲಿ 17 ಮಂದಿ ಸಾವನ್ನಪ್ಪಿದರು, ಅವರಲ್ಲಿ 12 ಮಂದಿ ಭಾರತೀಯರು ಎಂದು ಖಲೀಜ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಇಲ್ಲಿನ ಮೆಟ್ರೋ ನಿಲ್ದಾಣದ ಪಾರ್ಕಿಂಗ್‌ ನ ಪ್ರವೇಶ ಕೇಂದ್ರದ ಬಳಿ ಬಸ್ ಚಾಲಕ ಓವರ್‌ ಹೆಡ್ ಹೈಟ್ ಬ್ಯಾರಿಯರ್‌ಗೆ ಡಿಕ್ಕಿ ಹೊಡೆದಾಗ ಅಪಘಾತ ಸಂಭವಿಸಿತ್ತು. ಬಸ್‌ ನ ಮೇಲಿನ ಎಡ ಭಾಗಕ್ಕೆ ಹಾನಿಯಾಗಿದೆ ಎಂದು ವರದಿ ತಿಳಿಸಿದೆ. ಓಮನ್ ಮೂಲದ ಚಾಲಕನಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಸಂತ್ರಸ್ತರ ಕುಟುಂಬಗಳಿಗೆ 3.4 ಮಿಲಿಯನ್ ದಿರ್ಹಮ್ ಹಣವನ್ನು ಪಾವತಿಸಲು ಆದೇಶಿಸಲಾಗಿದೆ.

ಮುಹಮ್ಮದ್ ಬೇಗ್ ಮಿರ್ಜಾ ಅವರ ವಕೀಲರ ಪ್ರಕಾರ, ಯುಎಇ ವಿಮಾ ಪ್ರಾಧಿಕಾರ ಪ್ರಾಥಮಿಕ ರಾಜಿ ನ್ಯಾಯಾಲಯವು ಆರಂಭದಲ್ಲಿ ಅವರಿಗೆ ಪರಿಹಾರವಾಗಿ 1 ಮಿಲಿಯನ್ ದಿರ್ಹಂ ನೀಡಿತು. ನಂತರ ಅರ್ಜಿದಾರರು ದುಬೈ ಫಸ್ಟ್ ಇನ್‌ಸ್ಟಾನ್ಸ್ ನ್ಯಾಯಾಲಯವನ್ನು ಮೇಲ್ಮನವಿ ಸಲ್ಲಿಸಿದಾಗ ಪರಿಹಾರದ ಅಂಕಿಅಂಶವನ್ನು 5 ಮಿಲಿಯನ್ ದಿರ್ಹಮ್‌ ಗೆ ಏರಿಸುವಂತೆ ತೀರ್ಪು ನೀಡಿತು.

ಇದನ್ನೂ ಓದಿ:ಅಬ್ಬರಿಸಲು ರೆಡಿಯಾದ Prajwal Devaraj: ‘ವೀರಂ’ ಇಂದು ಬಿಡುಗಡೆ

Advertisement

ಮಿರ್ಜಾ ಅವರು ತಮ್ಮ ಸಂಬಂಧಿಕರೊಂದಿಗೆ ರಜಾದಿನಗಳನ್ನು ಕಳೆದ ನಂತರ ಮಸ್ಕತ್‌ ನಿಂದ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದಾಗ ಅವರು ತೀವ್ರವಾಗಿ ಗಾಯಗೊಂಡರು. 14 ದಿನಗಳ ಕಾಲ ಪ್ರಜ್ಞಾಹೀನರಾಗಿದ್ದ ಅವರು ಎರಡು ತಿಂಗಳ ಕಾಲ ದುಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ವರದಿಯ ಪ್ರಕಾರ, ಮೆಕ್ಯಾನಿಕಲ್ ಎಂಜಿನಿಯರಿಂಗ್‌ ನಲ್ಲಿ ಡಿಪ್ಲೊಮಾ ಅಧ್ಯಯನ ಮಾಡುತ್ತಿದ್ದ ಅವರು ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಅಪಘಾತದ ಕಾರಣದಿಂದ ಅವರ ಅಧ್ಯಯನವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next