Advertisement

ದುಬೈ: ಇಂಡಿಯನ್‌ ಸ್ಕೂಲ್‌ನ ಸಿಇಒ ಬದಲಾವಣೆ  

09:57 AM Dec 14, 2019 | Team Udayavani |

ದುಬೈ: “ದ ಇಂಡಿಯನ್‌ ಸ್ಕೂಲ್‌ ದುಬೈ’ ತನ್ನ ಮುಖ್ಯಕಾರ್ಯ ನಿರ್ವಹಣಾಧಿಕಾರಿಯನ್ನು ಬದಲಾಯಿಸಿದೆ. ಈ ಹಿಂದೆ ಸಿಇಒ ಆಗಿ ಕೆಲಸ ನಿರ್ವಹಿಸುತ್ತಿದ್ದ ಅಶೋಕ್‌ ಕುಮಾರ್‌ ಅವರ ಬದಲು ಪುನೀತ್‌ ಎಂ.ಕೆ. ವಾಸು ಅವರನ್ನು ನೇಮಿಸಿ ಸಂಸ್ಥೆ ಆದೇಶ ಹೊರಡಿಸಿದೆ.

Advertisement

ತನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರನ್ನು ಬದಲಾಯಿಸಿದ ಸಂಸ್ಥೆ ಯಾವುದೇ ಕಾರಣವನ್ನು ನೀಡಿಲ್ಲ. ನೂತನ ಸಿಇಒ ಆಗಿ ಆಯ್ಕೆಯಾದ ಎಂ.ಕೆ. ವಾಸು ಅವರು ಸಂಸ್ಥೆಯ ಹಿರಿಯ ವಿದ್ಯಾರ್ಥಿಯಾಗಿದ್ದಾರೆ. ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ಅತೀ ಪ್ರಭಾವಿ ಮತ್ತು ಪ್ರಮುಖ ವ್ಯಕ್ತಿಯಾಗಿರುವ ಕುಮಾರ್‌ ಅವರು 23 ವರ್ಷಗಳಿಂದ “ದ ಇಂಡಿಯನ್‌ ಸ್ಕೂಲ್‌ ಇನ್‌ ದುಬೈ’ ಇದರ ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದರು.

ಇವರು ಪ್ರಶಸ್ತಿ ಪುರಸ್ಕೃತ ಶಿಕ್ಷಣ ತಜ್ಞರಾಗಿದ್ದು, ಹಲವು ಪಠ್ಯ ಪುಸ್ತಗಳು ಹಾಗೂ ಪುಸ್ತಕಗಳನ್ನು ಬರೆದಿದ್ದಾರೆ. ಮಾತ್ರವಲ್ಲದೆ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಇವರು ತಮ್ಮ ಜೀವನ ಶ್ರೇಷ್ಠ ಸಾಧನೆಗಾಗಿ 2019ರ ಎಉಖಖ ಉಛucಚಠಿಜಿಟn ಅಡಿಚrಛ ಪುರಸ್ಕಾರವನ್ನು ಪಡೆದಿದ್ದರು.

ದುಬೈ ಇಂಡಿಯನ್‌ ಸ್ಕೂಲ್‌ಗೆ ಶಿಕ್ಷಕರನ್ನು ಭಾರತದಿಂದಲೇ ಆಯ್ಕೆಮಾಡಲಾಗುತ್ತದೆ. ಇಲ್ಲಿ ಭಾರತೀಯ ಮೂಲದ ಶಿಕ್ಷಕರನ್ನೇ ಹೆಚ್ಚು ಬಳಸಿಕೊಳ್ಳಲಾಗುತ್ತದೆ. ಸಂಸ್ಥೆಯಲ್ಲಿರುವವರಲ್ಲಿ ಬಹುತೇಕರು ಭಾರತೀಯರೆ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next