Advertisement

Israel ಯುದ್ಧ ನಿಲ್ಲಿಸಲು ಭಾರತ ಸರಕಾರ ಪ್ರಯತ್ನಿಸಬೇಕು: ತಂಝೀಂ ಮನವಿ

10:52 PM Nov 17, 2023 | Team Udayavani |

ಭಟ್ಕಳ : ಪ್ಯಾಲೇಸ್ತೀನ್ ಮೇಲಿನ ಯುದ್ದವನ್ನು ಇಸ್ರೇಲ್ ನಿಲ್ಲಿಸಲು ಭಾರತ ಸರಕಾರ ಪ್ರಯತ್ನಿಸಬೇಕು ಎಂದು ಆಗ್ರಹಿಸಿ ಮಜ್ಲಿಸೆ ಇಸ್ಲಾಹ ವ ತಂಝೀಂ ನೇತೃತ್ವದಲ್ಲಿ ಶುಕ್ರವಾರ ಮಧ್ಯಾಹ್ನ ಸಾವಿರಾರು ಮುಸ್ಲಿಮರು ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಿದರು.

Advertisement

ಮನವಿಯಲ್ಲಿ ಪ್ಯಾಲೇಸ್ತೀನ್ ಮೇಲಿನ ಇಸ್ರೇಲ್ ದಾಳಿಯನ್ನು ಬಲವಾಗಿ ಖಂಡಿಸಿರುವ ಮಜ್ಲಿಸೆ ಇಸ್ಲಾಹ ವ ತಂಝೀಂ, ಯುದ್ದದಲ್ಲಿ ಮಕ್ಕಳು, ಮಹಿಳೆಯರು ಅಮಾಯಕರು ಬಲಿಯಾಗುತ್ತಿದ್ದಾರೆ. ಪ್ಯಾಲೇಸ್ತೇನ್ ಶಾಲೆ, ಆಸ್ಪತ್ರೆ ಮೇಲೆ ಇಸ್ರೇಲ್ ಸರಕಾರ ಬಾಂಬ್ ದಾಳಿ ಮಾಡಿ ಹಲವರು ಸಾವಿಗೆ ಕಾರಣವಾಗಿದೆ. ಯುದ್ದದಲ್ಲಿ 11500 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್ ದಾಳಿ ಬಗ್ಗೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಸೂಕ್ತ ತನಿಖೆ ನಡೆಸಬೇಕು. ಯುದ್ದ ನಿಲ್ಲಿಸಿ ಶಾಂತಿ ಸ್ಥಾಪಿಸಲು ಭಾರತ ಸರಕಾರ ಮುಂದಾಗಬೇಕು. ನಿರಂತರ ದಾಳಿ ನಡೆಸುತ್ತಿರುವ ಇಸ್ರೇಲಿಗೆ ಯಾವುದೇ ದೇಶ ಯಾವುದೇ ರೀತಿಯ ನೆರವು ನೀಡಬಾರದು. ಇದಕ್ಕೆ ಆರ್ಥಿಕ ದಿಗ್ಭಂಧನ ಹೇರಬೇಕು ಎಂದು ಆಗ್ರಹಿಸಿದರು.

ಜನರನ್ನುದ್ದೇಶಿಸಿ ಮಾತನಾಡಿದ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ ನ ಸದಸ್ಯ ಮೌಲಾನಾ ಇಲ್ಯಾಸ ನದ್ವಿ, ಪ್ಯಾಲೇಸ್ತೀನ್ ಮೇಲಿನ ಇಸ್ರೇಲ್ ದಾಳಿ ತತ್ ಕ್ಷಣ ನಿಲ್ಲಿಸಬೇಕು. ಭಾರತ ಸರಕಾರ ಈ ಬಗ್ಗೆ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.

ತಂಝೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ, ಪ್ಯಾಲೇಸ್ತೀನ್ ಮೇಲೆ ಇಸ್ರೇಲ್ ದಾಳಿ ನಿಂತು ಅಲ್ಲಿ ಶಾಂತಿ ಸ್ಥಾಪನೆಯಾಗಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ. ಈಗಾಗಲೇ ಯುದ್ದದಲ್ಲಿ ಸಾವಿರಾರರು ಜನ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಯುದ್ದದಿಂದ ಮತ್ತಷ್ಟು ಸಾವು ನೋವು ಆಗುವುದು ಬೇಡ. ಆ ನಿಟ್ಟಿನಲ್ಲಿ ಭಾರತ ಸರಕಾರ ಮಧ್ಯಪ್ರವೇಶಿಸಿ ಯುದ್ದವನ್ನು ನಿಲ್ಲಿಸುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.

ಸಹಾಯಕ ಆಯುಕ್ತೆ ಡಾ. ನಯನಾ ಮನವಿ ಸ್ವೀಕರಿಸಿ ರಾಷ್ಟ್ರಪತಿ ಮತ್ತು ಕೇಂದ್ರ ಸರಕಾರಕ್ಕೆ ಕಳುಹಿಸುವುದಾಗಿ ಹೇಳಿದರು. ತಂಝೀಂನ ರಾಜಕೀಯ ಸಂಚಾಲಕ ಇಮ್ರಾನ ಲಂಕಾ ಮನವಿ ಓದಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ ಜೆ, ಮುಖ್ಯ ಖಾಜಿ ಮೌಲಾನಾ ಮೊಹ್ದೀನ್ ರಬ್ ನದ್ವಿ, ಮುಸ್ಲೀಂ ಯುತ್ ಫೆಡರೇಶನ್ ನ ಅಧ್ಯಕ್ಷ ಅಝೀಜುರೆಹಮಾನ, ತಂಝೀಂ ಪದಾಧಿಕಾರಿಗಳು ಸೇರಿದಂತೆ ಸಾವಿರಾರರು ಮುಸ್ಲಿಮರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next