Advertisement
ಸರ್ಕಾರಿ ಸಂಸ್ಥೆಯೇ ಕೇಂದ್ರ ಸರ್ಕಾರಿ ಸಂಸ್ಥೆ ವಿರುದ್ಧ ಎಫ್ ಐಆರ್ ದಾಖಲಿಸಿ, ಅಭಿವೃದ್ಧಿ ಕಾಮಗಾರಿಗೆ ಅಡ್ಡಿ ಉಂಟುಮಾಡಿರುವುದು ನಗರದ ನಾಯಂಡಹಳ್ಳಿಯಲ್ಲಿ ನಡೆದಿದ್ದು, ಘಟನೆಯು ತಡವಾಗಿ ಬೆಳಕಿಗೆಬಂದಿದೆ.
Related Articles
Advertisement
ಅಂತಿಮವಾಗಿ ಬಿಬಿಎಂಪಿ ಮುಖ್ಯ ಆಯುಕ್ತರು, “ಗೇಲ್ ನಗರದ ಹೊರವರ್ತುಲ ರಸ್ತೆಯಲ್ಲಿ ಅಂದರೆ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಸುಮನಹಳ್ಳಿ ಮತ್ತು ನಾಯಂಡಹಳ್ಳಿ ಮಾರ್ಗದಲ್ಲಿ ಅನಿಲ ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈ ಸಂಬಂಧ ಅಗತ್ಯ ಅನುಮತಿ ಪಡೆದಿದ್ದಾರೆ.
ಆದರೆ, ಸ್ಥಳೀಯ ಅಧಿಕಾರಿಗಳ ಮಾಹಿತಿ ಕೊರತೆಯಿಂದ ದೂರು ದಾಖಲಿಸಲಾಗಿದ್ದು, ಅದನ್ನು ಈಗ ಹಿಂಪಡೆಯಬೇಕು’ ಎಂದು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದೂರನ್ನು ಅಲ್ಲಿಗೇ ಕೈಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನಲ್ಲಿ ಏನಿದೆ? :
“ನಾಯಂಡಹಳ್ಳಿಯ ಕಲ್ಯಾಣಿ ಮೋಟಾರ್ ಮುಂಭಾಗದಲ್ಲಿ ಗೇಲ್, ಡಿಗ್ಗಿಂಗ್ ಯಂತ್ರದಿಂದ ರಸ್ತೆ ಅಗೆದಿದ್ದು, ಸುಮಾರು 10 ಮೀಟರ್‌ಗೂ ಅಧಿಕರಸ್ತೆಯನ್ನು ಹಾಳುಮಾಡಿದೆ. ಈ ಬಗ್ಗೆ ಸಂಸ್ಥೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ನಮ್ಮದು ಸಣ್ಣಕಂಪನಿಯಲ್ಲ; ದೊಡ್ಡ ಕಂಪನಿಯಾಗಿದೆ. ನೀವೇನಾದರೂ ನಮ್ಮ ಕೆಲಸಕ್ಕೆ ಅಡ್ಡಿಪಡಿಸಿದರೆ, ನಿಮ್ಮ ಕೆಲಸ ಕಳೆದುಕೊಳ್ಳುತ್ತೀರಾ ಎಂದು ಬೆದರಿಕೆ ಹಾಕಿರುತ್ತಾರೆ. ಈಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬಿಬಿಎಂಪಿ ಕಿರಿಯ ಎಂಜಿನಿಯರೊಬ್ಬರು ದೂರುದಾಖಲಿಸಿದ್ದಾರೆ. “ಮಾಹಿತಿ ಕೊರತೆಯಿಂದ ಗೇಲ್‌ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ನಂತರದಲ್ಲಿ ಕಾಮಗಾರಿಗೆ ಸಂಬಂಧಿಸಿದಂತೆ ಆನ್‌ಲೈನ್‌ನಲ್ಲಿಅನುಮತಿ ಪಡೆದಿರುವುದು ಗೊತ್ತಾಯಿತು. ಹಾಗಾಗಿ, ದೂರು ಹಿಂಪಡೆಯಲಾಗಿದೆ. ಈ ಮಧ್ಯೆ ಕಾಮಗಾರಿಸ್ಥಗಿತಗೊಂಡಿಲ್ಲ; ಎಂದಿನಂತೆ ಅಲ್ಲಿ ಮುಂದುವರಿದಿದೆ’ ಎಂದು ದೂರು ನೀಡಿದ್ದ ಕಿರಿಯ ಎಂಜಿನಿಯರ್ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.
-ವಿಜಯಕುಮಾರ ಚಂದರಗಿ