Advertisement

“ಸದ್ಯದಲ್ಲೇ ಭಾರತೀಯ ಪಾದರಕ್ಷೆ ಅಳತೆ ವ್ಯವಸ್ಥೆ”

08:21 PM Jul 30, 2023 | Team Udayavani |

ನವದೆಹಲಿ: ಭಾರತೀಯ ಪಾದರಕ್ಷೆ ಅಳತೆ ವ್ಯವಸ್ಥೆಯನ್ನು ಸದ್ಯದಲ್ಲೇ ಬಿಡುಗಡೆಗೊಳಿಸಲಾಗುತ್ತದೆ, ಇದರಿಂದ ಜಾಗತಿಕವಾಗಿ ಭಾರತೀಯ ಅಳತೆಯನ್ನು ಜನಪ್ರಿಯಗೊಳಿಸಬಹುದು. ಹಾಗೆಯೇ ವಿದೇಶಿ ಅಳತೆ ವ್ಯವಸ್ಥೆಯಿಂದ ಹೊರತರಬಹುದು…

Advertisement

ಹೀಗೆಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ. ದೆಹಲಿಯಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಪಾದರಕ್ಷೆ ಉತ್ಸವದಲ್ಲಿ (ಐಐಎಫ್ಎಫ್) ಅವರು ಮಾತನಾಡಿದರು. ಪಾದರಕ್ಷೆ ಮತ್ತು ಚರ್ಮೋತ್ಪನ್ನಗಳ ಉದ್ಯಮ ಕೇವಲ ವಿದೇಶಿ ವಿನಿಮಯವನ್ನು ತಂದುಕೊಡುವುದು ಮಾತ್ರವಲ್ಲ, 45 ಲಕ್ಷ ಮಂದಿಗೆ ಉದ್ಯೋಗ ನೀಡಿದೆ. ಭಾರತಕ್ಕೆ ವಿಶ್ವದಲ್ಲೇ ಬೃಹತ್‌ ಮತ್ತು ಅತ್ಯುತ್ತಮ ಗುಣಮಟ್ಟದ ಪಾದರಕ್ಷೆ ಉತ್ಪಾದಕ ದೇಶವಾಗುವ ಸಾಮರ್ಥ್ಯವಿದೆ ಎಂದು ಸಚಿವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next