ಸಿಂಗಾಪುರ : ನಿರ್ಲಕ್ಷ್ಯದ ವಾಹನ ಚಾಲನೆಯಿಂದ ಇನ್ನೊಬ್ಬ ವಾಹನ ಚಾಲಕನ ಜೀವವನ್ನು ಬಲಿಪಡೆದ ಭಾರತ ಮೂಲದ ಇಂಜಿನಿಯರ್‌ಗೆ ಸಿಂಗಾಪುರದಲ್ಲಿ 10 ದಿನಗಳ ಜೈಲು ಶಿಕ್ಷೆಯಾಗಿದೆ ಮತ್ತು ಮುಂದಿನ ಹೈದು ವರ್ಷಗಳಿಗೆ ಆತನಿಗೆ ವಾಹನ ಚಾಲನೆಯನ್ನು ನಿಷೇಧಿಸಲಾಗಿದೆ.
ನಾಳೆ 70ರ ಹರೆಯಕ್ಕೆ ಕಾಲಿಡುವ ಎಸ್ ಎಸ್ ವಾಸುದೇವನ್ ನಿರ್ಲಕ್ಷ್ಯದ ವಾಹನ ಚಾಲನೆ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ. ಕಳೆದ ವರ್ಷ ಮೇ ತಿಂಗಳಲ್ಲಿ ಆತ ಕಾರು ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿತ್ತು.
ಕಾನೂನುಬಾಹಿರವಾಗಿ ಆತ ಕಾರನ್ನು ಎಡಕ್ಕೆ ಚಲಾಯಿಸಿದ ಪರಿಣಮವಾಗಿ 19 ವರ್ಷ ಪ್ರಾಯದ ಬೈಕ್ ಸವಾರ ಮುಂಮ್ಮದ್ ಅರಾಫತ್ ಎಂಬಾತ ತೀವ್ರವಾಗಿ ಗಾಯಗೊಂಡು ಬಳಿಕ ಹಲವು ಬಗೆಯ ಗಂಭೀರ ಗಾಯಗಳಿಂದಾಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದ.
ಗಂಟೆಗೆ 110 ಕಿ.ಮೀ. ವೇಗದಲ್ಲಿ ಕಾರನ್ನು ಚಲಾಯಿಸುತ್ತಿದ್ದ ವಾಸುದೇವನ್‌ಗೆ ಇದರ ದುಪ್ಪಟ್ಟು ವೇಗದಲ್ಲಿ ಬರುತ್ತಿದ್ದ ಬೈಕ್ ಸವಾರನು, ಕಾರನ್ನು ಕಾನೂನು ಬಾಹಿರವಾಗಿ ಎಡಕ್ಕೆ ತಿರುಗಿಸುವಾಗ ಗೋಚರವಾಗೇ ಇರಲಿಲ್ಲ.
ವಾಸುದೇವನ್ ಕಾರು ಬೈಕ್ ಸವಾರನಿಗೆ ಗುದ್ದಿದಾಗ, ಬೈಕ್ ಸವಾರನು ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಓರ್ವ ಚೀನೀ ಪ್ರಜೆ ಲಿನ್ ಜಿಯನಾನ್, 17, ಮತ್ತು ಚೆನ್ ವಾಯಿ 25, ಅವರಿಗೆ ಢಿಕ್ಕಿ ಹೊಡೆದಿದ್ದ.
ವಾಸುದೇವನ್ ತನ್ನ 10 ದಿನಗಳ ಜೈಲು ಶಿಕ್ಷೆಯನ್ನು ಇದೇ ಸೆ.15ರಂದು ಆರಂಭಿಸಬೇಕೆಂದು ಜಿಲ್ಲಾ ನ್ಯಾಯಾಧೀಶೆ ಡಯಾನಾ ಹ್ಯಾವನ್ ಹೋ ಆದೇಶಿಸಿದ್ದಾರೆ.