Advertisement

ಭಾರತೀಯರ ಉದ್ಯೋಗ ವೀಸಾಕ್ಕೆ ಆಸಿಸ್‌ ಕತ್ತರಿ

03:45 AM Apr 19, 2017 | Team Udayavani |

ಮೆಲ್ಬರ್ನ್: ನಿರುದ್ಯೋಗ ಸಮಸ್ಯೆಗೆ ಕೊನೆಹಾಡುವ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಸರ್ಕಾರವು ಇಲ್ಲಿನ ಜನಪ್ರಿಯ ಉದ್ಯೋಗ ವೀಸಾವನ್ನು ರದ್ದು ಮಾಡುವುದಾಗಿ ಘೋಷಿಸಿದೆ. ಇದು ಜಾರಿಯಾದೊಡನೆ, 95 ಸಾವಿರ ಮಂದಿ ವಿದೇಶಿ ನೌಕರರು(ಈ ಪೈಕಿ ಬಹುತೇಕರು ಭಾರತೀಯರು) ಉದ್ಯೋಗ ಕಳೆದುಕೊಳ್ಳುವುದು ಖಚಿತ. 

Advertisement

“457 ವೀಸಾ’ದಡಿ ಕೌಶಲ್ಯದ ಕೆಲಸಗಳಿಗಾಗಿ 4 ವರ್ಷಗಳ ಕಾಲ ವಿದೇಶಿಗರನ್ನು ನೇಮಕ ಮಾಡುವ ಅವಕಾಶ ಉದ್ದಿಮೆಗಳಿಗಿರುತ್ತವೆ. ಆದರೆ, ಈಗ ಈ ವೀಸಾವನ್ನು ರದ್ದು ಮಾಡಿ, ಇಂಗ್ಲಿಷ್‌ ಹಾಗೂ ಕೌಶಲ್ಯ ಇರುವವರಿಗಷ್ಟೇ ಉದ್ಯೋಗ ನೀಡುವ ಹೊಸ ವೀಸಾ ನೀತಿ ಜಾರಿ ಮಾಡಲು ಆಸ್ಟ್ರೇಲಿಯಾ ಮುಂದಾಗಿದೆ. 457 ವೀಸಾ ಹೊಂದಿರುವವರ ಪೈಕಿ ಭಾರತೀಯರೇ ಅಧಿಕ ಸಂಖ್ಯೆಯಲ್ಲಿದ್ದು, ನಂತರದ ಸ್ಥಾನವನ್ನು ಯುಕೆ ಮತ್ತು ಚೀನಾ ಪಡೆದಿದೆ.
ಅಧ್ಯಾದೇಶಕ್ಕೆ ಸಹಿ: ಇದೇ ವೇಳೆ, ಅತ್ಯಧಿಕ ಕೌಶಲ್ಯವಿರುವ ಮತ್ತು ಅಧಿಕ ವೇತನ ಪಡೆಯುವವರಿಗಷ್ಟೇ ವೀಸಾ ನೀಡುವಂಥ ಪರಿಷ್ಕೃತ ಎಚ್‌-1ಬಿ ವೀಸಾ ಅಧ್ಯಾದೇಶಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಸಹಿ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next