Advertisement

ಭಾರತದ ಆರ್ಥಿಕತೆ ಸುಸ್ಥಿರ:  ಐಎಂಎಫ್ 

06:50 AM Oct 16, 2017 | Team Udayavani |

ವಾಷಿಂಗ್ಟನ್‌: ಕಳೆದ ವಾರವಷ್ಟೇ ಭಾರತದ ಆರ್ಥಿಕ ಅಭಿವೃದ್ಧಿ ನಿರೀಕ್ಷೆಯನ್ನು ಇಳಿಸಿದ್ದ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಈಗ ಭಾರತದ ಆರ್ಥಿಕ ಪ್ರಗತಿ ಉತ್ತಮವಾಗಿದೆ ಎಂದಿದೆ. 

Advertisement

ನೋಟು ಅಮಾನ್ಯ ಹಾಗೂ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಕ್ರಮಗಳನ್ನು ಜಾರಿಗೊಳಿಸಿದ ಹಿನ್ನೆಲೆಯಲ್ಲಿ 2018ರ ಆರ್ಥಿಕ ಅಭಿವೃದ್ಧಿ ನಿರೀಕ್ಷೆಯನ್ನು ಶೇ.6.7 ಕ್ಕೆ ಐಎಂಎಫ್ ಇಳಿಸಿತ್ತು. ಆದರೆ ವಾಷಿಂಗ್ಟನ್‌ನಲ್ಲಿ ನಡೆದ ಐಎಂಎಫ್ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಿನ್‌ ಲಗಾರ್ಡೆ ಅವರು ಭಾರತದ ಆರ್ಥಿಕ ಅಭಿವೃದ್ಧಿಯ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ.

“ಭಾರತದ ವಿಚಾರಕ್ಕೆ ಬಂದರೆ ಆರ್ಥಿಕ ಪ್ರಗತಿ ನಿರೀಕ್ಷೆಯನ್ನು ನಾವು ಇಳಿಸಿದ್ದೇವೆ. ಆದರೆ ಭಾರತವು ಕೈಗೊಂಡ ಕ್ರಮಗಳಿಂದಾಗಿ ಮಧ್ಯಮ ಮತ್ತು ದೀರ್ಘಾವಧಿಯ ಆರ್ಥಿಕ ಪ್ರಗತಿ ಸಶಕ್ತವಾಗಿದೆ’ ಎಂದು ಲಗಾರ್ಡೆ ಹೇಳಿದ್ದಾರೆ. ಅದರಲ್ಲೂ ಮಧ್ಯಾವಧಿಯಲ್ಲಿ ಭಾರತದ ಅಭಿವೃದ್ಧಿಯ ಗತಿ ಅತ್ಯಂತ ಸುಸ್ಥಿರವಾಗಿದೆ. ವಿತ್ತೀಯ ಕೊರತೆ ಕಡಿಮೆಯಾಗಿದ್ದು, ಹಣದುಬ್ಬರ ಇಳಿಕೆಯಾ ಗಿದೆ. ಜತೆಗೆ ಸುಧಾರಣಾ ಕ್ರಮಗಳನ್ನೂ ಕೈಗೊಂಡಿರುವುದರಿಂದ ಭಾರತದ ಯುವಕ ರಿಗೆ ಉದ್ಯೋಗ ಲಭ್ಯವಾಗುವ ಸಾಧ್ಯತೆ ಭವಿಷ್ಯದಲ್ಲಿ ಹೆಚ್ಚಾಗಿದೆ ಎಂದಿದ್ದಾರೆ.

ಈ ಮಧ್ಯೆ ಆರ್ಥಿಕತೆ ತಳಮಟ್ಟಕ್ಕೆ ಕುಸಿದಿದ್ದು, 2018-19ರಲ್ಲಿ ಸುಸ್ಥಿರ ಅಭಿ ವೃದ್ಧಿ ನಿರೀಕ್ಷಿಸಲಾಗಿದೆ ಎಂದು ನೀತಿ ಆಯೋಗ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಹೇಳಿದ್ದಾರೆ. ಪ್ರಸ್ತುತ ತ್ತೈಮಾಸಿಕ ದಲ್ಲಿ ಜಿಡಿಪಿ ಶೇ. 6.9 ರಿಂದ 7ರಲ್ಲಿ ಅಭಿವೃದ್ಧಿ ಕಾಣಲಿದ್ದು, 2018 -19ರಲ್ಲಿ ಶೇ. 7.5 ಕ್ಕೆ ಏರಲಿದೆ. ಈ ಆರ್ಥಿಕ ಕುಸಿತ ಆರಂಭವಾ ಗಿದ್ದು, 2013- 14ನೇ ಸಾಲಿನಲ್ಲಾಗಿದ್ದರೂ, 2016ರಲ್ಲಿ ಪ್ರಗತಿ ಏರುಗತಿ ಸಾಧಿಸಿತ್ತು ಎಂದಿದ್ದಾರೆ.

ಜಿಎಸ್‌ಟಿಯನ್ನು ಮೆಚ್ಚಿದ ಐಎಂಎಫ್: ಜಿಎಸ್‌ಟಿಯನ್ನು ಮಹತ್ವದ ಸುಧಾರಣಾ ಕ್ರಮ ಎಂದು ಲಗಾರ್ಡೆ ಉಲ್ಲೇಖೀಸಿದ್ದಾರೆ. ಅಲ್ಲದೆ ಅಲ್ಪಾವಧಿಯಲ್ಲಿ ಆರ್ಥಿಕತೆ ಕುಸಿತ ಕಂಡಿರುವುದು ಅಚ್ಚರಿಯ ಸಂಗತಿಯಾಗಿದೆ ಎಂದಿದ್ದಾರೆ.

Advertisement

ಆರ್ಥಿಕ ಉತ್ತೇಜನ ಪ್ಯಾಕೇಜ್‌ ಪ್ರಸ್ತಾಪವಿಲ್ಲ: ಜೇಟ್ಲಿ
“ಆರ್ಥಿಕ ಉತ್ತೇಜನ ಪ್ಯಾಕೇಜ್‌ ಪ್ರಸ್ತಾವನೆಯೇ ಇಲ್ಲ. ಸನ್ನಿವೇಶಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತೇವೆ ಎಂದು ನಾನು ಹೇಳಿದ್ದೆ. ಆದರೆ ಅದನ್ನು ಮಾಧ್ಯಮಗಳು ಆರ್ಥಿಕ ಉತ್ತೇಜನ ಪ್ಯಾಕೇಜ್‌ ಎಂದು ತಪ್ಪಾಗಿ ಅರ್ಥೈಸಿಕೊಂಡಿವೆ’ ಎಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. 

ಇದೇ ವೇಳೆ ಐಎಂಎಫ್ ಮತ್ತು ವಿಶ್ವ ಬ್ಯಾಂಕ್‌ನ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಜೇಟ್ಲಿ, ಐಎಂಎಫ್ ಕೋಟಾ ಮರುಪರಿಶೀಲ ನೆಗೆ ಆಗ್ರಹಿಸಿದ್ದಾರೆ. ವಿಶ್ವದ ಆರ್ಥಿಕ ಸ್ಥಿತಿ ಮತ್ತು ಭಾರತದ ಪ್ರಗತಿಯನ್ನು ಗಮನದಲ್ಲಿರಿಸಿಕೊಂಡು ಈ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಅಲ್ಲದೆ ಎಚ್‌1ಬಿ ವೀಸಾ ಬಗ್ಗೆ ಅಮೆರಿಕ ಶೀಘ್ರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈ ವೀಸಾ ಪಡೆದು ಅಮೆರಿಕಕ್ಕೆ ಆಗಮಿಸುವ ಭಾರತೀಯರು ಅಕ್ರಮ ವಲಸಿಗರಲ್ಲ ಎಂದು ಜೇಟಿÉ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next