Advertisement

ಭಾರತದ ಆರ್ಥಿಕ ಕುಸಿತ ಜಾಗತಿಕ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ

09:40 AM Jan 21, 2020 | Hari Prasad |

ವಾಷಿಂಗಟನ್: ಭಾರತದ ಮಾರುಕಟ್ಟೆಯಲ್ಲಿ ಉಂಟಾಗಿರುವ ಆರ್ಥಿಕ ಕುಸಿತದ ಪರಿಣಾಮ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಉಂಟಾಗಿರುವ ಆರ್ಥಿಕ ಕುಸಿತವು ಜಾಗತಿಕ ಮಾರುಕಟ್ಟೆಯ ಬೆಳವಣಿಗೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

Advertisement

2020ರಲ್ಲಿ ಜಾಗತಿಕ ಅಭಿವೃದ್ಧಿ 3.3% ತಲುಪುವ ನಿರೀಕ್ಷೆಯನ್ನು ಐ.ಎಂ.ಎಫ್. ವ್ಯಕ್ತಪಡಿಸಿದ್ದು ಇದು 2019ರ 2.9% ಬೆಳವಣಿಗೆಗಿಂತ ಅಧಿಕವಾಗಿದೆ. ಆದರೆ ಕಳೆದ ಅಕ್ಟೋಬರ್ ನಲ್ಲಿ ಐ.ಎಂ.ಎಫ್. 2020ರಲ್ಲಿ ಘೋಷಿತ ಅಂದಾಜು ಜಾಗತಿಕ ಮಾರುಕಟ್ಟೆ ಅಭಿವೃದ್ಧಿ ದರಕ್ಕಿಂತ 0.2 ಕಡಿತಗೊಳಿಸಿದೆ.

ಭಾರತ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳ ದೇಶೀ ಮಾರುಕಟ್ಟೆಯಲ್ಲಿ ಗ್ರಾಹಕ ಬೇಡಿಕೆ ಕುಸಿತವಾಗಿರುವುದು ಮತ್ತು ಅಮೆರಿಕಾ – ಚೀನಾ ವ್ಯಾಪಾರ ಸಮರ ಜಾಗತಿಕ ಆರ್ಥಿಕ ರಂಗದ ಮೇಲೆ ಗಾಢವಾದ ಪರಿಣಾಮ ಬೀರಿರುವುದನ್ನು ಐ.ಎಂ.ಎಫ್. ಗುರುತಿಸಿದೆ.

ಭಾರತ ಮಾತ್ರವಲ್ಲದೇ ಚಿಲಿ ಹಾಗೂ ಮೆಕ್ಸಿಕೋ ದೇಶಗಳಲ್ಲೂ ಸಹ ಆರ್ಥಿಕ ಪ್ರಗತಿ ಸಾಕಷ್ಟು ಕುಸಿತ ಕಂಡಿರುವುದನ್ನು ಐ.ಎಂ.ಎಫ್. ಗುರುತಿಸಿದೆ. ಚಿಲಿಯಲ್ಲಿ ರಾಜಕೀಯ ವಿಪ್ಲವ ಆರ್ಥಿಕ ಪ್ರಗತಿಗೆ ಮಾರಕವಾಗಿದ್ದರೆ ಮೆಕ್ಸಿಕೋದಲ್ಲಿ ಹೂಡಿಕೆ ಹಿಂತೆಗೆತದ ಪರಿಣಾಮ ಅಲ್ಲಿನ ಮಾರುಕಟ್ಟೆಗಳ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next