Advertisement

ಅಮೆರಿಕದಲ್ಲಿ ವೈದ್ಯನನ್ನೇ ಅಟ್ಟಾಡಿಸಿ ಕೊಂದ ರೋಗಿ

10:10 AM Sep 16, 2017 | Team Udayavani |

ಕನ್ಸಾಸ್‌: ಅಮೆರಿಕದಲ್ಲಿ ತೆಲಂಗಾಣ ಮೂಲದ ಮನಃಶಾಸ್ತ್ರಜ್ಞರೊಬ್ಬರನ್ನು ರೋಗಿಯೇ ಅಟ್ಟಾಡಿಸಿ, ಇರಿದು ಹತ್ಯೆ ಮಾಡಿದ್ದಾನೆ. ಅವರ ರೋಗಿಯೇ ಈ ಕೃತ್ಯ ಎಸಗಿದ್ದಾನೆ. ಅಮೆರಿಕದ ಕನ್ಸಾಸ್‌ನಲ್ಲಿ ಈ ಘಟನೆ ನಡೆದಿದೆ. ಆರಂಭದಲ್ಲಿ ಇದೊಂದು ಜನಾಂಗೀಯ ಹತ್ಯೆ ಎಂದು ನಂಬಲಾಗಿತ್ತಾದರೂ, ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ 21 ವರ್ಷ ವಯಸ್ಸಿನ ಭಾರತೀಯ-ಅಮೆರಿಕನ್‌ ಯುವಕನನ್ನು ಬಂಧಿಸಿದ್ದಾರೆ. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂದು ಗೊತ್ತಾಗಿಲ್ಲ.

Advertisement

 ಅಸುನೀಗಿದ ವೈದ್ಯರನ್ನು ಡಾ| ಅಚ್ಯುತ ರೆಡ್ಡಿ (57) ಎಂದು ಗುರುತಿಸಲಾಗಿದೆ. ಅವರ ತಂದೆ ಬೆಂಗಳೂರು ಮೂಲದವರಾಗಿದ್ದು, ತಾಯಿ ಹೈದರಾಬಾದ್‌ನವರು ಎಂದು ಕೆಲ ಮಾಧ್ಯಮ ವರದಿಗಳು ತಿಳಿಸಿವೆ. ಅಚ್ಯುತರ  ಪತ್ನಿ ಬೀನಾ ರೆಡ್ಡಿ ಕೂಡ ವೈದ್ಯರು. ಬುಧವಾರ ಸಂಜೆ 7 ಸಮಯದಲ್ಲಿ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಪೊಲೀಸರು ಉಮರ್‌ ರಶೀದ್‌ ದತ್‌ ಎಂಬ 21 ವರ್ಷದ ಭಾರತ ಅಮೆರಿಕನ್‌ ಯುವಕನನ್ನು ಬಂಧಿಸಿ ದ್ದಾರೆ. ವೈದ್ಯ ಹಾಗೂ ಉಮರ್‌ ನಡುವೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದಾಗ ಆರೋಪಿ ತನ್ನ ಬಳಿ ಇದ್ದ ಚಾಕು ತೆಗೆದುಕೊಂಡು ವೈದ್ಯನನ್ನು ಕ್ಲಿನಿಕ್‌ನಲ್ಲಿ ಅಟ್ಟಾಡಿಸಿ, ಹಲವು ಬಾರಿ ಇರಿದು ಕೊಂದಿ ದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

“ಆರೋಪಿ ವೈದ್ಯ ಅಚ್ಯುತ್‌ ಅವರ ಬಳಿ ಚಿಕಿತ್ಸೆಗೆ ಬರುತ್ತಿದ್ದ ರೋಗಿ. ಹತ್ಯೆ ನಡೆದ ದಿನ ಇಬ್ಬರೂ ಒಟ್ಟಿಗೇ ಕ್ಲಿನಿಕ್‌ಗೆ ಬಂದಿದ್ದಾರೆ. ಆ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನು ಗಮನಿಸಿದ ಕಚೇರಿ ಕೋಣೆಯೊಳಗೆ ಹೋದಾಗ ಆರೋಪಿ ಉಮರ್‌, ಅಚ್ಯುತ್‌ರನ್ನು ನಿಂದಿಸುತ್ತಿದ್ದ. ಮ್ಯಾನೇಜರ್‌ ಮಧ್ಯಪ್ರವೇಶಿಸಿ ನಿಂದಿಸಲು ಕಾರಣ ಕೇಳಿದಾಗ ವೈದ್ಯ ಅಚ್ಯುತ್‌ ತಪ್ಪಿಸಿಕೊಳ್ಳಲು ನೋಡಿದ್ದಾರೆ. ಈ ವೇಳೆ ಕ್ಲಿನಿಕ್‌ನಲ್ಲೇ ಅಟ್ಟಾಡಿಸಿದ ಆರೋಪಿ, ಇರಿದು ಹತ್ಯೆ ಮಾಡಿದ್ದಾನೆ. ನಾವು ಸ್ಥಳಕ್ಕೆ ತೆರಳುವ ಹೊತ್ತಿಗೆ ಅಚ್ಯುತ್‌ ಕೊನೆಯುಸಿರೆಳೆದಿದ್ದರು,’ ಎಂದು ಪೊಲೀಸ್‌ ಅಧಿಕಾರಿ ಟೊಡ್‌ ಓಜಿಲ್‌ ತಿಳಿಸಿದ್ದಾರೆ. 

ಕ್ಲಬ್‌ಗ ಹೋಗಿದ್ದ
ವೈದ್ಯನನ್ನು ಹತ್ಯೆಗೈದ ಅನಂತರ ಉಮರ್‌  ಕ್ಲಬ್‌ ಒಂದಕ್ಕೆ ಹೋಗಿದ್ದ. ಒಳಕ್ಕೆ ತೆರಳುವ ಮುನ್ನ ಆತ ಕಾರ್‌ನಲ್ಲಿ ಕೆಲ ಹೊತ್ತು ಕುಳಿತು, ನಂತರ ಒಳ ಪ್ರವೇಶಿಸಿದ್ದ. ಅದನ್ನು ಭದ್ರತಾ ಸಿಬಂದಿ ಗಮನಿಸಿ ಪೊಲೀಸ ರಿಗೆ ಕರೆ ಮಾಡಿ ಅನುಮಾನಾಸ್ಪದ ವ್ಯಕ್ತಿ ಇದ್ದಾನೆ. ಅವನ ಮೈ ಮೇಲೆ ರಕ್ತದ ಕಲೆಗಳಿವೆ ಎಂದಿದ್ದಾನೆ. ಪೊಲೀಸರು ಆಗಮಿಸಿ ಆತನನ್ನು ಬಂಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next