Advertisement
ಶುಕ್ರವಾರ ಆರಂಭ ವಾಗುವ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭವನ್ನು ಭಾರತ ಬಹಿಷ್ಕರಿಸಿದೆ.
Related Articles
Advertisement
ಇದಾದ ಬೆನ್ನಲ್ಲೇ ದೂರದರ್ಶನವು “ನಾವು ಒಲಿಂಪಿಕ್ಸ್‌ನ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭ ಕಾರ್ಯಕ್ರಮಗಳನ್ನು ನೇರಪ್ರಸಾರ ಮಾಡುವುದಿಲ್ಲ’ ಎಂದು ಪ್ರಸಾರ ಭಾರತಿ ಮುಖ್ಯಸ್ಥ ಶಶಿಶೇಖರ್ ವೆಂಪತಿ ಟ್ವೀಟ್ ಮಾಡಿದ್ದಾರೆ.
ವಿಶೇಷವೆಂದರೆ, ಜಮ್ಮು ಮತ್ತು ಕಾಶ್ಮೀರದ ಸ್ಕೀಯರ್ ಆರಿಫ್ ಮೊಹಮ್ಮದ್ ಖಾನ್ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಅತ್ಲೀಟ್.
ನಾಚಿಕೆಗೇಡು ಎಂದ ಅಮೆರಿಕ:
ಗಾಲ್ವಾನ್ ಸಂಘರ್ಷದ ಕಮಾಂಡರ್‌ನನ್ನು ಟಾರ್ಚ್ ಬೇರರ್ ಆಗಿ ನೇಮಿಸಿರುವ ಚೀನದ ಕ್ರಮವನ್ನು ಅಮೆರಿಕವೂ ಖಂಡಿಸಿದೆ. ಅಮೆರಿಕದ ರಿಪಬ್ಲಿಕನ್ ಸಂಸದ ಜಿಮ್ ರಿಶ್ ಈ ಕ್ರಮವನ್ನು “ನಾಚಿಕೆ ಗೇಡಿನದ್ದು’ ಎಂದಿದ್ದಾರೆ. “2020ರಲ್ಲಿ ಭಾರತದ ಯೋಧರ ಮೇಲೆ ದಾಳಿ ಮಾಡಿದ ಮತ್ತು ಉಯುYರ್ ಮುಸ್ಲಿಮರ ನರಮೇಧ ನಡೆಸುತ್ತಿರುವ ಸೇನೆಯ ಕಮಾಂಡರ್‌ನನ್ನು ಒಲಿಂಪಿಕ್ಸ್ ಜ್ಯೋತಿಧಾರಿಯಾಗಿ ನೇಮಿಸಿದ್ದು ನಾಚಿಕೆಗೇಡು. ಅಮೆರಿಕ ಉಯುYರ್ ಮುಸ್ಲಿಮರ ಸ್ವಾತಂತ್ರ್ಯ ಮತ್ತು ಭಾರತದ ಸಮಗ್ರತೆಯನ್ನು ಬೆಂಬಲಿಸುತ್ತದೆ’ ಎಂದಿದ್ದಾರೆ.
ಯಾರೀ ಕಮಾಂಡರ್? :
2020ರ ಜೂ. 15ರಂದು ಗಾಲ್ವಾನ್‌ನಲ್ಲಿ ಭಾರತದ ಯೋಧರು ಮತ್ತು ಚೀನೀ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿದ್ದಾಗ, ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ರೆಜಿಮೆಂಟ್‌ನ ಕಮಾಂಡರ್ ಆಗಿದ್ದ ಖೀ ಫಬಾವೋ ತಲೆಗೆ ಗಂಭೀರ ಗಾಯಗಳಾಗಿದ್ದವು. ಅವರನ್ನು ಚೀನದ ಸರಕಾರಿ ಮಾಧ್ಯಮಗಳು “ಹೀರೋ’ ಎಂದು ಬಿಂಬಿಸಿದ್ದವು. ಈಗ ಒಲಿಂಪಿಕ್ಸ್‌ನ 1,200 ಜ್ಯೋತಿಧಾರಿಗಳ ಪೈಕಿ ಖೀ ಫಬಾವೋ ಅವರಿಗೆ ಪ್ರಮುಖ ಸ್ಥಾನ ನೀಡಲಾಗಿದೆ.
ಗಾಲ್ವಾನ್ ಘರ್ಷಣೆ: ಮೃತಪಟ್ಟದ್ದು 42 ಚೀನೀ ಸೈನಿಕರು! :
ಭಾರತ-ಚೀನ ನಡುವೆ 2020ರ ಜೂ. 15ರಂದು ನಡೆದ ಗಾಲ್ವಾನ್ ಘರ್ಷಣೆಯಲ್ಲಿ “ನಮ್ಮ ಸೈನಿಕರು ಮೃತಪಟ್ಟಿಲ್ಲ’ ಎಂಬ ಚೀನದ ಹೇಳಿಕೆ ಸುಳ್ಳಿನ ಕಂತೆ ಎನ್ನುವುದು ಮತ್ತೂಮ್ಮೆ ಸಾಬೀತಾಗಿದೆ. ಅಂದು ಚೀನದ ಕನಿಷ್ಠ 38 ಸೈನಿಕರು ಗಾಲ್ವಾನ್ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಆಸ್ಟ್ರೇಲಿಯಾದ ಪತ್ರಿಕೆ “ದಿ ಕ್ಲ್ಯಾಕ್ಸನ್’ ತನಿಖಾ ವರದಿ ಬಹಿರಂಗಪಡಿಸಿದೆ.
ಗಾಲ್ವಾನ್ ಘರ್ಷಣೆ ಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಆದರೆ ಚೀನ ತನ್ನ ಕಡೆ ಸಾವು-ನೋವು ಸಂಭವಿಸಿಲ್ಲ ಎಂದಿತ್ತು. 2021ರ ಫೆಬ್ರವರಿಯಲ್ಲಿ ನಾಲ್ವರು ಸೈನಿಕರಿಗೆ ಬೀಜಿಂಗ್ ಮರಣೋತ್ತರ ಪದಕ ಘೋಷಿದಾಗ ಚೀನೀ ಸೈನಿಕರು ಮೃತಪಟ್ಟಿದ್ದು ನಿಜ ಎಂಬುದು ಜಗಜ್ಜಾಹೀರಾಗಿತ್ತು. ಈಗ ಚೀನದ ಸಾಮಾಜಿಕ ಜಾಲತಾಣಗಳ ಸಂಶೋಧಕರ ತಂಡ ನೀಡಿದ ವರದಿ, ಚೀನೀ ನಾಗರಿಕರಿಂದ ಪಡೆದ ಮಾಹಿತಿ, ಚೀನೀ ಆಡಳಿತವು ಅಳಿಸಿರುವ ಮಾಧ್ಯಮ ವರದಿಗಳ ಆಧಾರದಲ್ಲಿ “ದಿ ಕ್ಲಾéಕ್ಸನ್’ ಪತ್ರಿಕೆ ತನಿಖಾ ವರದಿ ಪ್ರಕಟಿಸಿದೆ. ಅದರಲ್ಲಿ ಗಾಲ್ವಾನ್ ಘರ್ಷಣೆ ನಡೆದಂದು ನದಿಯನ್ನು ದಾಟಿ ವಾಪಸ್ ಹೋಗುವ ಪ್ರಯತ್ನದಲ್ಲಿ 38 ಚೀನೀ ಸೈನಿಕರು ಮಡಿದಿರುವುದನ್ನು ಉಲ್ಲೇಖೀಸಲಾಗಿದೆ.
ಅಂದು ನಡೆದದ್ದೇನು? :
ಜೂ. 15ರ ರಾತ್ರಿ ಚೀನದ ಒತ್ತುವರಿಯನ್ನು ತೆರವು ಮಾಡಲು ಭಾರತೀಯ ಯೋಧರು ಗಾಲ್ವಾನ್ ಕಣಿವೆಗೆ ಧಾವಿ ಸಿದ್ದರು. ಅಲ್ಲಿದ್ದ 150ರಷ್ಟು ಚೀನೀ ಸೈನಿಕರು ಏಕಾಏಕಿ ಭಾರತೀಯ ಯೋಧರೊಂದಿಗೆ ಕೈ ಕೈ ಮಿಲಾಯಿಸಿದ್ದರು. ನಾಲ್ವರು ಚೀನೀ ಸೈನಿಕರು ಮೃತಪಟ್ಟ ಬಳಿಕ ಪಿಎಲ್‌ಎಯ ಇತರ ಸೈನಿಕರು ಹೆದರಿ ಹಿಮ್ಮೆಟ್ಟಲಾರಂಭಿಸಿದರು. ಕಡುಕತ್ತಲಲ್ಲಿ ಹಿಮಾವೃತ ಗಾಲ್ವಾನ್ ನದಿಗೆ ಹಾರಿ ತಪ್ಪಿಸಿ ಕೊಳ್ಳುವ ಯತ್ನದಲ್ಲಿ 38 ಮಂದಿ ಕೊಚ್ಚಿ ಹೋದರು ಎಂದು ತನಿಖಾ ವರದಿ ಹೇಳಿದೆ.