Advertisement

ಪಾಕಿಸ್ಥಾನದಲ್ಲಿ ಭಾರತೀಯ ರಾಜತಾಂತ್ರಿಕರಿಗೆ ಕೀಟಲೆ, ಕಿರುಕುಳ

11:39 AM Dec 22, 2018 | udayavani editorial |

ಹೊಸದಿಲ್ಲಿ : ಪಾಕಿಸ್ಥಾನದಲ್ಲಿ  ಕರ್ತವ್ಯದ ಮೇಲೆ ವಾಸವಾಗಿರುವ ಅನೇಕ ಭಾರತೀಯ ರಾಜತಾಂತ್ರಿಕರಿಗೆ ನೆರೆಯ ದೇಶದಲ್ಲಿ ಕಿರುಕುಳ ನೀಡಲಾಗುತ್ತಿರುವ ಬಗ್ಗೆ  ಅನೇಕ ದೂರುಗಳು ಬರುತ್ತಿವೆ. 

Advertisement

ಭಾರತೀಯ ರಾಜತಾಂತ್ರಿಕರ ನಿವಾಸಗಳಿಗೆ ಹೊಸ ಗ್ಯಾಸ್‌ ಕನೆಕ್ಷನ್‌ ನಿರಾಕರಿಸುವುದು; ಅವರನ್ನು ಭೇಟಿಯಾಗಲು ಬರುವ ಅತಿಥಿಗಳಿಗೆ ಕಿರುಕುಳ ನೀಡುವುದು; ಕೆಲವು ಹಿರಿಯ ಅಧಿಕಾರಿಗಳ ಇಂಟರ್‌ನೆಟ್‌ ಸಂಪರ್ಕವನ್ನು ತಡೆಯುವುದು – ಇವೇ ಮೊದಲಾದ ರೀತಿಯಲ್ಲಿ ಭಾರತೀಯ ರಾಜತಾಂತ್ರಿಕರಿಗೆ ಪಾಕ್‌ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಕಳೆದ ಡಿ.10ರಂದು ಭಾರತೀಯ ರಾಜತಾಂತ್ರಿಕರೋರ್ವರ ಅಧಿಕೃತ ನಿವಾಸಕ್ಕೆ ಆಗಂತುಕನೋರ್ವ ಯಾವುದೇ ಬಗೆಯ ಭದ್ರತೆಯ ಅಡೆತಡೆಗಳಿಲ್ಲದೆ ನೇರವಾಗಿ ನುಗ್ಗಿ ಬಂದಿದ್ದ. 

ಈ ಎಲ್ಲ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಿರುವ  ವಿದೇಶ ವ್ಯವಹಾರಗಳ ಸಚಿವಾಲಯ ಈ ವಿಷಯವನ್ನು ಪಾಕ್‌ ಉನ್ನತರಲ್ಲಿ ಎತ್ತಿದೆ. ಈ ರೀತಿಯ ತೊಂದರೆಗಳನ್ನು ನೀಡಕೂಡದೆಂದು ಅದು ಸ್ಪಷ್ಟವಾಗಿ ತಿಳಿಸಿದೆ.

ಹಾಗೆ ನೋಡಿದರೆ ಪಾಕಿಸ್ಥಾನದಲ್ಲಿನ ಭಾರತೀಯ ರಾಜತಾಂತ್ರಿಕರಿಗೆ ಪಾಕ್‌ ಅಧಿಕಾರಿಗಳು ಕಿರುಕುಳ ನೀಡುವುದು ಇದೇ ಮೊದಲಲ್ಲ. ಈ ವರ್ಷ ಮಾರ್ಚ್‌ನಲ್ಲೂ ಪಾಕ್‌ ಅಧಿಕಾರಿಗಳು ಭಾರತೀಯ ರಾಜತಾಂತ್ರಿಕರಿಗೆ ಕಿರುಕುಳ ನೀಡಿದ್ದರು. 

Advertisement

ವಿಚಿತ್ರವೆಂದರೆ ದಿಲ್ಲಿಯಲ್ಲಿನ ಪಾಕ್‌ ದೂತಾವಾಸದ ಅಧಿಕಾರಿಗಳು ಕೂಡ ತಮಗೆ ಕೂಡ ಭಾರತೀಯ ಅಧಿಕಾರಿಗಳು ಇದೇ ರೀತಿಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ 30ರಂದು ಉಭಯ ದೇಶಗಳು ಉನ್ನತ ಮಟ್ಟದ ಚರ್ಚೆ ನಡೆಸಿ ರಾಜತಾಂತ್ರಿಕರಿಗೆ ಸಂಬಂಧಿಸಿದ 1992ರ ನೀತಿ ಸಂಹಿತೆಗೆ ಅನುಗುಣವಾಗಿ ಈ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಲು ಒಪ್ಪಿಕೊಂಡಿದ್ದವು. ಆದರೆ  ಪಾಕ್‌ ಚಾಳಿ ಮಾತ್ರ ಅಂತೆಯೇ ಮುಂದುವರಿರಿದೆ ಎಂದು ಭಾರತೀಯ ದೂತಾವಾಸದ ಮೂಲಗಳು ಹೇಳಿವೆ.  

Advertisement

Udayavani is now on Telegram. Click here to join our channel and stay updated with the latest news.

Next