Advertisement
ನಿಟ್ಟೆ ವಿ.ವಿ.ಯ ಪದವಿ ಪ್ರದಾನ ಕಾರ್ಯಕ್ರಮದ ಬಳಿಕ ಸುದ್ದಿಗಾರರೊದಿಗೆ ಮಾತನಾಡಿದ ಅವರು, ಜುಲೈ 2023ರಿಂದ ಕಾರ್ಯನಿರ್ವಹಣೆ ಆರಂಭಿಸಲಿರುವ ಇಂಡಿಯನ್ ಡಿಜಿಟಲ್ ಯೂನಿವರ್ಸಿಟಿ ಮೂಲಕ ಶಿಕ್ಷಕರಿಗೆ ಭಾಗಶಃ ಆನ್‌ಲೈನ್ ಮೂಲಕ ತರಬೇತಿ ನೀಡಲು ಉದ್ದೇಶಿಸಲಾಗಿದೆ. ತರಬೇತಿಯ ವಿಧಾನಗಳನ್ನು ರೂಪಿಸಲು ಮತ್ತು ತರಬೇತಿ ಕೇಂದ್ರಗಳನ್ನು ಆಯ್ಕೆ ಮಾಡಲು ಶಿಕ್ಷಣ ಸಚಿವಾಲಯ, ಎಐಸಿಟಿಇ, ಯುಜಿಸಿ ಮತ್ತು ಇತರ ಮಧ್ಯಸ್ಥಗಾರರ ಪ್ರತಿನಿಧಿ ಗಳನ್ನು ಒಳಗೊಂಡ ಸಮಿತಿಯನ್ನು ಯುಜಿಸಿ ರಚಿಸಿದೆ. ತರಬೇತಿಗಾಗಿ ಐಐಟಿ ಮತ್ತು ಐಐಎಂ ತಜ್ಞರನ್ನು ನೇಮಿಸಿಕೊಳ್ಳಲಾಗುವುದು ಎಂದರು.
ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗಾಗಿ ಎಐಸಿಟಿಇ, ಯುಜಿಸಿ, ಎನ್‌ಸಿಟಿಇ ಮೊದಲಾದ ಮಂಡಳಿಗಳನ್ನು ವಿಲೀನಗೊಳಿಸಿ ರಾಷ್ಟ್ರೀಯ ಉನ್ನತ ಶಿಕ್ಷಣ ನಿಯಂತ್ರಣ ಮಂಡಳಿಯನ್ನು ರಚಿಸ ಲಾಗುತ್ತಿದೆ. ವೈದ್ಯಕೀಯ, ಕಾನೂನು, ಕೃಷಿ ಸೇರಿದಂತೆ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳೂ ಇದರ ವ್ಯಾಪ್ತಿಗೆ ಬರಲಿವೆ. ನ್ಯಾಕ್, ಎನ್‌ಐಆರ್‌ಎಫ್ ಮೊದಲಾದ ಮಾನ್ಯತಾ ಸಂಸ್ಥೆಗಳನ್ನು ಒಗ್ಗೂಡಿಸಿ ನ್ಯಾಶನಲ್ ಅಕ್ರೆಡಿಟೇಷನ್ ಕೌನ್ಸಿಲನ್ನು ರಚಿಸಲಾಗುತ್ತದೆ. ಅವರು ಭಾರತೀಯ ಉನ್ನತ ಶಿಕ್ಷಣ ಆಯೋಗ ಮಸೂದೆಯನ್ನು ಕಾಯ್ದೆಯಾಗಿ ಜಾರಿಗೊಳಿಸಲು ಶಿಕ್ಷಣ ಸಂಸ್ಥೆಗಳನ್ನು ಸಜ್ಜುಗೊಳಿಸಬೇಕಾಗಿದೆ ಎಂದರು.