Advertisement

Constitution: ಭಾರತದ ಪ್ರಜಾಪ್ರಭುತ್ವ, ಸಂವಿಧಾನ ವಿಶ್ವಕ್ಕೆ ಮಾದರಿ: ಶಾಸಕ ಗಾಲಿ ರೆಡ್ಡಿ

02:41 PM Sep 15, 2023 | Team Udayavani |

ಗಂಗಾವತಿ: ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದ್ದು, ಕೋಟ್ಯಾಂತರ ಜನರನ್ನು ಒಂದು ವ್ಯವಸ್ಥೆಯಲ್ಲಿ ತರುವ ಮೂಲಕ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅತ್ಯುತ್ತಮ ಪ್ರಜಾತಂತ್ರ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆಂದು ಶಾಸಕ ಹಾಗೂ ಕೆಆರ್‌ಪಿ ಪಕ್ಷದ ಸಂಸ್ಥಾಪಕಾಧ್ಯಕ್ಷ ಗಾಲಿ ಜನಾರ್ದನರೆಡ್ಡಿ ಹೇಳಿದರು.

Advertisement

ಅವರು ತಾಲೂಕು ಆಡಳಿತ ಆಯೋಜಿಸಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದ ನಿಮಿತ್ತ ಸಂವಿಧಾನದ ಪೀಠಿಕೆ ಓದುವ ಅಭಿಯಾನದಲ್ಲಿ ಪಾಲ್ಗೊಂಡು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಹಾಗೂ ಸಂವಿಧಾನ ಪೀಠಿಕೆಯಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ದೇಶ ಎಲ್ಲಾ ಜನರನ್ನೊಳಗೊಂಡ ಆಡಳಿತ ವ್ಯವಸ್ಥೆಯೇ ಪ್ರಜಾತಂತ್ರವಾಗಿದೆ. ಸಂವಿಧಾನದಲ್ಲಿ ಜಾತಿ, ಧರ್ಮ, ಭಾಷೆ, ಸಂಸ್ಕೃತಿ ಹಾಗೂ ಆರ್ಥಿಕ, ಸಾಮಾಜಿಕ, ರಾಜಕೀಯವನ್ನು ಗೌರವಿಸುವ ಜತೆಗೆ ಅನ್ಯರಿಗೆ ನೋವಾಗದಂತೆ ಸರ್ವರಿಗೂ ಧರ್ಮ, ಜಾತಿ ಆಚಾರ ವಿಚಾರಗಳನ್ನು ಆಚರಣೆ ಮಾಡುವ ಮೂಲಕ ಭಾರತದ ಸಾರ್ವಭೌತ್ವವನ್ನು ಎತ್ತಿ ಹಿಡಿಯುವುದು ಕರ್ತವ್ಯವಾಗಿದೆ ಎಂದರು.

ಬಾಬಾ ಸಾಹೇಬರ ಆಶಯದಂತೆ ಹಲವು ಕ್ಷೇತ್ರಗಳಲ್ಲಿ ದೇಶ ಪ್ರಗತಿ ಸಾಧಿಸಿದೆ. ಕೆಲವರ ಅಧಿಕಾರ ದಾಹದಿಂದಾಗಿ ಕಳೆದ 75 ವರ್ಷಗಳಲ್ಲಿ ದೇಶ ಎಷ್ಟು ಎತ್ತರಕ್ಕೇರಬೇಕಿತ್ತೋ ಅಷ್ಟನ್ನು ಸಾಧಿಸಲು ಆಗಿಲ್ಲ. ಆದ್ದರಿಂದ ವಿದ್ಯಾರ್ಥಿ ಯುವ ಜನರು ದೇಶದ ಭವಿಷ್ಯದ ಭವ್ಯ ನಾಗರೀಕರಾಗಿದ್ದು ಅಂಬೇಡ್ಕರ್, ಬುದ್ಧ, ಬಸವ, ನಾರಾಯಣ ಗುರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ವಿದ್ಯಾವಂತರಾಗಿ ಪಾಲಕರ ಕನಸು ನನಸು ಮಾಡುತ್ತ ದೇಶಾಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿರಿಯರು ತನು, ಮನ, ಧನವನ್ನು ಲೆಕ್ಕಿಸದೇ ತ್ಯಾಗ ಮಾಡಿ ಹುತಾತ್ಮರಾಗಿದ್ದು ಅವರಂತೆ ಪ್ರತಿಯೊಬ್ಬರೂ ಸ್ವಾತಂತ್ರ್ಯ ಪ್ರೇಮಿಯಾಗಿ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.

Advertisement

2020 ರ ಜನವರಿ 26 ರಂದು ಗಂಗಾವತಿಯ ಕೊಲ್ಲಿನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕರು ಮಕ್ಕಳಲ್ಲಿ ಸಂವಿಧಾನ ಹಾಗೂ ದೇಶದ ಬಗ್ಗೆ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಸಂವಿಧಾನದ ಪೀಠಿಕೆಯನ್ನು ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸಾಮೂಹಿಕವಾಗಿ ಹೇಳುವ ಮೂಲಕ ಅಭಿಯಾನ ಆರಂಭಿಸಿದ್ದು ಹೆಮ್ಮೆಯ ಸಂಗತಿ ಇದೀಗ ರಾಜ್ಯ ಸರಕಾರ ಸಂವಿಧಾನದ ಪೀಠಿಕೆ ಓದುವ ಅಭಿಯಾನ ನಡೆಸಿದ್ದು ಅತ್ಯುತ್ತಮವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಂಜುನಾಥ ಭೋಗಾವತಿ, ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ಶರಣಪ್ಪ ಚವ್ಹಾಣ, ಬಿಇಒ ವೆಂಕಟೇಶ ಸಿಂಧೆ, ಬಿಸಿಎಂ ಅಧಿಕಾರಿ ಉಷಾ ಕಲ್ಮನಿ, ಸುರೇಶ, ಪಿಐ ಅಡಿವೇಶ, ಪೌರಾಯುಕ್ತ ವಿರೂಪಾಕ್ಷಮೂರ್ತಿ, ಪ್ರಾಚಾರ್ಯರಾದ ಶಾಂತಪ್ಪ, ಬಸಪ್ಪ ನಾಗೋಲಿ, ಗದ್ದೆಪ್ಪ, ಶಿಕ್ಷಣ ಇಲಾಖೆಯ ರಾಘವೇಂದ್ರ, ದೇವೆಂದ್ರ, ದಲಿತ ಸಂಘಟನೆಗಳ ಮುಖಂಡ, ನ್ಯಾಯವಾದಿ ಹುಸೇನಪ್ಪ ಹಂಚಿನಾಳ, ಹಂಪೇಶ ಅರಿಗೋಲು, ಹುಸೇನಪ್ಪ ಮಾದಿಗ, ದೇವಣ್ಣ, ತಿಮ್ಮಣ್ಣ ಹಂಚಿನಾಳ, ಪತ್ರಕರ್ತ ಸೈಯದ್ ಅಲಿ, ವೆಂಕಟೇಶ ಚಲುವಾದಿ, ಹುಲುಗೇಶ ಸೇರಿ ನಗರದ ಶಾಲಾ-ಕಾಲೇಜು ಪ್ರಾಚಾರ್ಯರು, ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕರು ಮತ್ತು ಸಾವಿರಾರು ವಿದ್ಯಾರ್ಥಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next