Advertisement

3 ವರ್ಷಗಳಲ್ಲಿ ದೇಶದ 334 ಸೈನಿಕರು ಆತ್ಮಹತ್ಯೆಗೆ ಶರಣು; ಸಚಿವ ಸುಭಾಶ್

09:49 AM Jan 08, 2019 | Sharanya Alva |

ನವದೆಹಲಿ:ಕಳೆದ ಮೂರು ವರ್ಷಗಳಲ್ಲಿ ದೇಶದ ಸೇನೆ, ನೌಕಾದಳ ಹಾಗೂ ವಾಯುದಳದಲ್ಲಿ ಸುಮಾರು 334 ಸೈನಿಕರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿರುವುದಾಗಿ ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ.

Advertisement

2018ರಲ್ಲಿ ಸೇನೆ, ನೌಕಾದಳ, ವಾಯುದಳ ಸೇರಿ 104 ಸೈನಿಕರನ್ನು ಕಳೆದುಕೊಂಡಿದ್ದರೆ, 2017ರಲ್ಲಿ 101 ಸೈನಿಕರು ಹಾಗೂ 2016ರಲ್ಲಿ 129 ಮಂದಿ ಸೈನಿಕರು ಆತ್ಮಹತ್ಯೆಗೆ ಶರಣಾಗಿರುವುದಾಗಿ ರಕ್ಷಣಾ ಖಾತೆಯ ರಾಜ್ಯ ಸಚಿವ ಸುಭಾಶ್ ಭಾಮ್ರೆ ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ದೇಶವನ್ನು ರಕ್ಷಿಸುವ ಸೈನಿಕರ ಹಿತ ಕಾಪಾಡುವ ಹಾಗೂ ಆರೋಗ್ಯಕರ ವಾತಾವರಣ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ಮಾಹಿತಿ ನೀಡಿದರು. ಭದ್ರತಾ ಪಡೆಯ ಅಧಿಕಾರಿಗಳು, ಇತರ ಶ್ರೇಣಿಯ ಸಿಬ್ಬಂದಿಗಳಿಗಾಗಿ ಉತ್ತಮ ಬಟ್ಟೆ, ಆಹಾರ, ಶಿಕ್ಷಣ, ಪ್ರಯಾಣ ವ್ಯವಸ್ಥೆ, ವಿವಾಹಿತರಿಗೆ ಸಮರ್ಪಕ ವಸತಿ ಸೇರಿದಂತೆ ಹಲವು ಗುಣಮಟ್ಟದ ಸೌಲಭ್ಯ ನೀಡಲಾಗುತ್ತಿದೆ ಎಂದು ವಿವರಿಸಿದರು.

ಅಲ್ಲದೇ ಸೈನಿಕರಿಗೆ ಮಾನಸಿಕ ಒತ್ತಡದಿಂದ ಹೊರಬರಲು ಯೋಗ ಮತ್ತು ಧ್ಯಾನದ ತರಬೇತಿ ನೀಡಲಾಗುತ್ತಿದೆ. ಆರ್ಮಿ ಮತ್ತು ವಾಯುಸೇನೆಗೆ ಮಾನಸಿಕ್ ಸಹಾಯತಾ ಸಹಾಯವಾಣಿಯನ್ನು ಆರಂಭಿಸಿದ್ದು, ಅಗತ್ಯವಿದ್ದವರಿಗೆ ಕೌನ್ಸಲಿಂಗ್ ನಡೆಸಲಾಗುತ್ತಿದೆ ಎಂದು ಸಚಿವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next