ಉಜ್ಜೈನಿ: ಇಂದೋರ್ ಏಕದಿನ ಪಂದ್ಯಕ್ಕೂ ಮುನ್ನ ಭಾರತ ತಂಡದ ಕೆಲವು ಆಟಗಾರರು ಪುಣ್ಯಕ್ಷೇತ್ರವಾದ ಉಜ್ಜೈನಿಯ ಶ್ರೀ ಮಹಾಕಾಲೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಭೇಟಿ ನೀಡಿದರು.
ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್ ಸೋಮವಾರ ಬೆಳಗ್ಗೆ ದೇವಸ್ಥಾನಕ್ಕೆ ತೆರಳಿ “ಭಸ್ಮ ಆರತಿ’ ಮಾಡುವ ಮೂಲಕ ಶಿವನಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದವ ರೊಂದಿಗೆ ಮಾತಾಡಿದ ಸೂರ್ಯಕುಮಾರ್, “ನಮ್ಮ ಸಹ ಆಟಗಾರ ರಿಷಭ್ ಪಂತ್ ಬೇಗನೇ ಚೇತರಿಸಿಕೊಳ್ಳಲಿ’ ಎಂದು ಪ್ರಾರ್ಥಿ ಸಿದ್ದಾಗಿ ಹೇಳಿದರು.
ಭಾರತ ತಂಡದ ಸದಸ್ಯರು ಮಹಾ ನಿರ್ವಾಣಿ ಅಖಾಡದ ಮಹಂತ್ ಶ್ರೀ ವಿನೀತ್ ಗಿರಿಜೀ ಮಹಾರಾಜ್ ಅವರ ಆಶ್ರಮಕ್ಕೂ ಭೇಟಿ ನೀಡಿ ಆಶೀರ್ವಾದ ಪಡೆದರು. ಬಳಿಕ ಉಜ್ಜೈನಿಯ ಲೋಕಸಭಾ ಸದಸ್ಯ ಅನಿಲ್ ಫಿರೋಜಿಯಾ ಅವರು ಕ್ರಿಕೆಟಿಗರನ್ನು ಸಮ್ಮಾನಿಸಿದರು.