Advertisement

ಸಂವಿಧಾನ ನಮಗೆಲ್ಲ ದಾರಿದೀಪ

03:28 PM Nov 30, 2021 | Shwetha M |

ಆಲಮಟ್ಟಿ: ಸೂರ್ಯ, ಚಂದ್ರ ಕೊಟ್ಟ ಬೆಳಕು ಭೂ ಮಂಡಲಕ್ಕಾದರೆ ಅಂಬೇಡ್ಕರ್‌ ಅವರು ಸಂವಿಧಾನದ ಮೂಲಕ ಹರಿಸಿದ ಬೆಳಕು ನಮ್ಮೆಲ್ಲರ ಬಾಳಿಗೆ ದಾರಿ ದೀಪವಾಗಿದೆ ಎಂದು ಬಸವನಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು.

Advertisement

ಸ್ಥಳೀಯ ರಾವ್‌ ಬಹಾದ್ದೂರ್‌ ಫ.ಗು. ಹಳಕಟ್ಟಿ ಪ್ರೌಢಶಾಲೆಯಲ್ಲಿ ನಡೆದ ಭಾರತ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನ ನಮಗೆ ದಿವ್ಯ ಜ್ಞಾನ ಪ್ರಸರಣದ ಶಕ್ತಿ ಆಗಿದೆ. ಅಲ್ಲದೇ ಜನತಂತ್ರ ವ್ಯವಸ್ಥೆ ಗಟ್ಟಿಯಾಗಿರಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿಗಳು ಇತಿಹಾಸದ ಬಗ್ಗೆ ಅರಿತುಕೊಂಡು ಅಂಬೇಡ್ಕರ್‌, ಮಹಾತ್ಮ ಗಾಂಧಿ, ಗೌತಮ ಬುದ್ಧ, ಕಾಯಕಯೋಗಿ ಬಸವಣ್ಣ, ಅಕ್ಕ ಮಹಾದೇವಿ, ಸರೋಜಿನಿ ನಾಯ್ಡು, ಕಲ್ಪನಾ ಚಾವ್ಲಾ ಅವರ ವಿಚಾರಧಾರೆಗಳನ್ನು ಹೊಂದಬೇಕು. ಭಾರತದಲ್ಲಿ ಸುಮಾರು 5682 ಭಾಷೆಗಳಿವೆ. ಇದರಲ್ಲಿ ಹಲವು ಭಾಷೆಗಳಿಗೆ ಲಿಪಿಗಳಿಲ್ಲ. ಸುಮಾರು ಬಗೆ ಬಗೆ ಬುಡಕಟ್ಟು ಜನಾಂಗಗಳಿವೆ. ಈ ಜನರ ಕಲ್ಯಾಣಕ್ಕಾಗಿ ಸಂವಿಧಾನದಲ್ಲಿ ಒತ್ತು ನೀಡಲಾಗಿದೆ ಎಂದು ಹೇಳಿದರು.

ಉಪನ್ಯಾಸಕ ಬಿ.ಟಿ.ಕರದಾನಿ ಮಾತನಾಡಿದರು. ಶಿಕ್ಷಕ ಎನ್‌.ಎಸ್‌. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕ ವಿ.ಸಿ. ಜುಳಜುಳಿ, ಜಿ.ಎಸ್‌. ಗಣಿ, ಆರ್‌.ಎಂ. ರಾಠೊಡ, ಎಲ್‌.ಆರ್‌. ಸಿಂಧೆ, ಅನಿತಾ ರಾಠೊಡ, ಶಾಂತು ತಡಸಿ, ಜಿ.ಆರ್‌. ಜಾಧವ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next