Advertisement

Goa:ಬೋಟ್ ನಲ್ಲಿ ಅಪಾಯಕ್ಕೆ ಸಿಲುಕಿದ್ದ 26 ಪ್ರವಾಸಿಗರ ರಕ್ಷಣೆ

08:14 PM May 20, 2024 | Team Udayavani |

ಪಣಜಿ: ಹವಾಮಾನ ವೈಪರಿತ್ಯ ಮತ್ತು ಬೋಟ್‍ನಲ್ಲಿ ಇಂಧನ ಖಾಲಿಯಾಗಿ ಸಮುದ್ರದಲ್ಲಿ ಬೋಟ್‍ನಲ್ಲಿ ಸಿಲುಕಿದ್ದ 26 ಪ್ರವಾಸಿಗರನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬಂದಿಗಳು ಸಕಾಲಿಕ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಪ್ರವಾಸಿಗರೊಂದಿಗೆ ಇಬ್ಬರು ನಾವಿಕರನ್ನೂ ಯೋಧರು ರಕ್ಷಿಸಿದ್ದಾರೆ.

Advertisement

‘ನೆರುಲ್ ಪ್ಯಾರಡೈಸ್’ ಎಂಬ ಬೋಟ್ ಮುಗಾರ್ಂವ್ ಬಂದರಿನಿಂದ ಬೇರೆ ದಿಕ್ಕಿನಲ್ಲಿ ಸಾಗುತ್ತಿತ್ತು. ಕೋಸ್ಟ್ ಗಾರ್ಡ್ ಸಿಬಂದಿ ಬೋಟ್ ಅನ್ನು ಸುರಕ್ಷಿತವಾಗಿ ದಡಕ್ಕೆ ತಂದಿದ್ದಾರೆ.

ಪಣಜಿಯಿಂದ ಮುಗಾರ್ಂವ್ ಬಂದರಿಗೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿತ್ತು. 26 ಮಂದಿ ಪ್ರವಾಸಿಗರಿದ್ದರು. ಬೋಟ್ ಸಮುದ್ರದ ಅಲೆಗಳಿಗೆ ಸಿಲುಕಿದ್ದು ಇದೆ ವೇಳೆ ಇಂಧನವೂ ಖಾಲಿಯಾಗಿತ್ತು. ಸಿ-148 ರಲ್ಲಿ ಕೋಸ್ಟ್ ಗಾರ್ಡ್ ಸಿಬಂದಿ ಬೋಟ್ ಸಮುದ್ರ ಮಧ್ಯದಲ್ಲಿ ಸಿಲುಕಿಕೊಂಡಿರುವುದನ್ನು ಗಮನಿಸಿ ತತ್ ಕ್ಷಣ ಸಹಾಯಕ್ಕಾಗಿ ಮತ್ತೊಂದು ಬೋಟ್‍ನ್ನು ಕಳುಹಿಸಿದರು. ಈ ಬೋಟ್ ಪ್ರವಾಸಿಗರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿತು. ಅವರಿಗೆ ಪ್ರಥಮ ಚಿಕಿತ್ಸೆ ಕೂಡ ನೀಡಲಾಗಿದೆ ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next