Advertisement
ಎಲ್ಲವೂ ಕಮರ್ಷಿಯಲ್ ಆಗುತ್ತಿರುವ, ಹೊಸ ಬಗೆಯ ಸಾಹಿತ್ಯ-ಗಾನದತ್ತ ಎಲ್ಲರೂ ಹೊರಳುತ್ತಿರುವ ಈ ಸಂದರ್ಭದಲ್ಲಿ , ಸಾಧ್ವಿಯರ ಆಧ್ಯಾತ್ಮ ಪಯಣದ ಕುರಿತು ಹೇಳುವ ಯೋಚನೆ ಹೇಗೆ ಬಂತು?
Related Articles
Advertisement
ಒಂದು ವೇಳೆ ಹಾಡಿನ ಅಥವಾ ಪದದ ಭಾವಾರ್ಥ ತಪ್ಪಾಗಿಬಿಟ್ಟರೆ ಅಥವಾ ಮೂಲ ಹಿಂದಿ ಭಾಷೆಯಲ್ಲಿರುವ ಗೀತೆಗೆ ಸಿಗುವಂಥ “ಹಿಡಿತ’ ಇತರ ಭಾಷೆಯ ಹಾಡುಗಳಲ್ಲಿ ಸಿಗದೇ ಹೋದರೆ ಎಂಬ ಫೀಲ್ ಕಾಡಲ್ಲವಾ?
ಇಲ್ಲಿವರೆಗೆ ಆ ರೀತಿಯಾಗಿಲ್ಲ. ಮೊದಲನೇ ದಾಗಿ ನಾನು ಅನುವಾದಿಸಿಲ್ಲ. ನಾನು ಸಾಹಿತ್ಯಕ್ಕೆ ಸಂಗೀತ ನೀಡಿದ್ದೇನೆ. ಈ ರೀತಿಯಾಗದಿರಲು ಕಾರಣ ಆಗಲೇ ಹೇಳಿದಹಾಗೆ ವೈಭವ್ ಸಾಕಷ್ಟು ಅಧ್ಯಯನ ಮಾಡಿ ಅನುವಾದಿಸಿದ್ದಾರೆ. ಹಾಗೆಯೇ ಇದು ಪದದಿಂದ ಪದಕ್ಕೆ ಮಾಡಿದ ಅನುವಾದವಲ್ಲ. ಹಾಡಿನ ಭಾವಾರ್ಥವೇ ಇಲ್ಲಿ ಬರೆಯಲಾಗಿದೆ.
ಏಳು ಸಾಧ್ವಿಯರೂ, ಪುರುಷಾಧಿಪತ್ಯದ ವಿರುದ್ಧ ಬಂಡೆದ್ದರು ಮತ್ತು ಅದೇ ಸಂದರ್ಭದಲ್ಲಿ ತಮ್ಮ ಇಷ್ಟ ದೈವದ ಸ್ತುತಿಯಲ್ಲೂ ಮಹತ್ಸಾಧನೆ ಮಾಡಿದರು. ಇದನ್ನು ಗಾನದಲ್ಲಿ ಸಾಧಿಸುವ ರೀತಿ ಹೇಗೆ?
ನಮ್ಮ ಶಾಸ್ತ್ರೀಯ ಸಂಗೀತದಲ್ಲಿ ಹಾಡುವ ಅಭಂಗ , ಭಜನೆಗಳಲ್ಲೂ ಸಹ ಭಕ್ತಿ ಇದೆ. ಇದು ಒಂದು ರೀತಿಯ ಭಕ್ತಿಯೇ. ಆದ್ದರಿಂದ ಇಲ್ಲಿ ಸಂಗೀತ ಸಂಯೋಜನೆಗಳು ಪ್ರಮುಖವಾಗುವುದಿಲ್ಲ. ಬದಲಾಗಿ ಭಕ್ತಿ ಪ್ರಮುಖ ಅಂಶವಾಗುತ್ತದೆ. ಸಂಗೀತ, ಸ್ವರ, ನಾದ ನಿಮ್ಮ ಭಕ್ತಿಗೆ ಹತ್ತಿರವಾಗಿದ್ದು. ಸಂಗೀತಕ್ಕೂ ಒಂದು ಭಕ್ತಿ ಇದೆ. ಸಂಗೀತದಲ್ಲಿ ಅದರಲ್ಲೂ ಭಾರತೀಯ ಸಂಗೀತದಲ್ಲಿ , ಯಾವುದೇ ಶೈಲಿ ಸಂಗೀತದಲ್ಲಿ ಭಕ್ತಿ ಇದೆ. ಸಂಗೀತದಲ್ಲಿ ಭಕ್ತಿ ಇಲ್ಲದಿದ್ದರೆ ಅದು ಸಂಗೀತವಾಗುವುದಿಲ್ಲ ಕೇವಲ ಪದಗಳಾಗಿ ಉಳಿಯುತ್ತದೆ.
ಆಯಾ ಭಾಷೆಯಲ್ಲಿ ಹಾಡಿದರೆ ಆ ಮೂಲಕ ಹೆಚ್ಚು ಜನರನ್ನು ತಲುಪಬಹುದು ಅಲ್ಲವಾ? ನಿಮ್ಮ ಅಭಿಪ್ರಾಯವೇನು?
ಆಯಾ ಪ್ರದೇಶದ ಜನ ಅರ್ಥಮಾಡಿಕೊಳ್ಳ ಬಲ್ಲ ಭಾಷೆಯಲ್ಲಿ ಹಾಡಿದರೆ ಮಾತ್ರ ಜನರಿಗೆ ಅರ್ಥವಾಗುತ್ತದೆ. ಕರ್ನಾಟಕದಲ್ಲಿ ಕಾಶ್ಮೀರಿ ಹಾಡಿದರೂ ಕನ್ನಡಿಗರಿಗೆ ಅರ್ಥವಾಗುವುದಿಲ್ಲ . ಇನ್ನು ನನ್ನಿಂದಾಷ್ಟು ಜನರಿಗೆ ಭಾರತೀಯ ಸಾಧ್ವಿಯರ ಜೀವನದ ಮಹತ್ವ ತಿಳಿಸಬೇಕು ಅನ್ನುವದರೆಡೆಗೆ ಇದು ಸಣ್ಣ ಪ್ರಯತ್ನ.
ಸಾಧ್ವಿಯರ ಸಾಹಿತ್ಯಕ್ಕೆ ನ್ಯಾಯ ಒದಗಬೇಕೆಂದರೆ, ಅವರನ್ನು ಸಾಹಿತ್ಯದ ಮೂಲಕವೇ ಅರಿತಿರಬೇಕಾದುದು ಅಗತ್ಯ. ಈ ವಿಷಯದಲ್ಲಿ ನೀವು ಹೇಗೆಲ್ಲಾ ತಯಾರಿದ್ದಿರಿ?
ಸಾಧ್ವಿಯರ ಹಾಗೂ ಅವರ ಸಾಹಿತ್ಯದ ಕುರಿತು ಅರಿಯಲು ಸಾಹಿತ್ಯದ ನೆರವು ಬೇಕೇ ಬೇಕು. ಇಂದು ಕೆಲವು ಸಾಧ್ವಿಯರ ಸಾಹಿತ್ಯಕ್ಕೆ ಸಂಗೀತ ಸಂಯೋಜಿಸಿ, ಹಾಡುತ್ತಿದ್ದೇನೆ ಅಂದರೆ ಅವರ ಕುರಿತು, ಅವರ ಸಾಹಿತ್ಯದ ಕುರಿತು ಓದಿಕೊಂಡಿದ್ದೇನೆ. ಉದಾಹರಣೆಗೆ ಕನ್ನಡದ ಸಾದ್ವಿಯರ ಕುರಿತು ಓದಲು ನನಗೆ ಕನ್ನಡ ಭಾಷೆ ಬರದಿದ್ದರೂ, ಭಾಷೆಯನ್ನು ಬಲ್ಲವರ ಬಳಿ ಅವರ ಪುಸ್ತಕಗಳನ್ನು ಓದಿಸಿ ಅದರ ಮಹತ್ವವನ್ನು ಕೇಳಿ ತಿಳಿದುಕೊಂಡಿದ್ದೇನೆ. ಕನ್ನಡದ ಸಾಧ್ವಿಯರ ಕುರಿತು ಮರಾಠಿ, ಹಿಂದಿಗೆ ಅನುವಾದವಾಗಿರುವ ಪುಸ್ತಕಗಳನ್ನು ಓದಿಕೊಂಡಿದ್ದೇನೆ.
ಬೆಂಗಳೂರಿನಲ್ಲಿ ಇದು ನಿಮ್ಮ ಎಷ್ಟನೇ ಕಾರ್ಯ ಕ್ರಮ ?
ಈ ಹಿಂದೆ ನೀಡಿರುವ ಕಾರ್ಯ ಕ್ರಮದಲ್ಲಿ ಉಂಟಾದ ಅನುಭವ ಬಗ್ಗೆ ಹೇಳಿ. ಕಳೆದ 15 ವರ್ಷಗಳಿಂದ ನಾನು ಬೆಂಗಳೂರಿ ನಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಿದ್ದೇನೆ. ಬೆಂಗಳೂರಿನಲ್ಲಿ ಹಾಡಲು ಸಂತೋಷವಾಗುತ್ತದೆ, ಸಾಕಷ್ಟು ಜನ ಇಷ್ಟು ಪಟ್ಟು , ಬಂದು ಕೇಳುತ್ತಾರೆ. ಜನರಿಗೆ ಸಂಗೀತದ ಕುರಿತು ಅರಿವಿದೆ ಅದು ಖುಷಿಯ ವಿಷಯ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ , ಮೊದಲ ಬಾರಿಗೆ ಮಲ್ಹಾರ್ ಫೆಸ್ಟಿವಲ್‌ನಲ್ಲಿ ಹೊಸ ರಾಗವನ್ನು ಪ್ರಸ್ತುತಪಡಿಸಿದ್ದೆ. ಇದು ಮರೆಯಲಾಗದ ಕ್ಷಣ ಎನ್ನಬಹುದು. ಪ್ರತಿಬಾರಿ ಬಂದಾಗಲೂ ಹೊಸದನ್ನು ಪ್ರಸ್ತುತಪಡಿಸಿದ್ದೇನೆ. ಆದ್ದರಿಂದ ನನಗೆ ಬೆಂಗಳೂರು ಸದಾ ನನೆಪಿಡುವ ಸ್ಥಳ.
-ವಾಣಿ ಭಟ್