ನವದೆಹಲಿ: ಜಾಗತಿಕ ಮಕ್ಕಳಿಗೆ ಹೋಲಿಸಿದರೆ ಭಾರತೀಯ ಪುಟಾಣಿಗಳು ತ್ವರಿತವಾಗಿ ಮೊಬೈಲ್ ಪ್ರೌಢಿಮೆಯನ್ನು ತಲುಪಿದ್ದಾರೆ ಎಂದು ಮ್ಯಾಕೆಫೀ ಅಧ್ಯಯನ ವರದಿ ಹೇಳಿದೆ.
ಒಟ್ಟು 10 ಭೌಗೋಳಿಕ ಪ್ರದೇಶಗಳಲ್ಲಿ ಹೆತ್ತವರು ಮತ್ತು ಮಕ್ಕಳ ಮೇಲೆ ನಡೆಸಲಾದ ಅಧ್ಯಯನದಲ್ಲಿ ಈ ವಿಚಾರ ತಿಳಿದುಬಂದಿದೆ.
ಭಾರತದಲ್ಲಿ 10-14ರ ವಯೋಮಾನದ ಮಕ್ಕಳಲ್ಲಿ ಸ್ಮಾರ್ಟ್‌ಫೋನ್ ಬಳಕೆ ಶೇ.83ರಷ್ಟಿದೆ. ಅಂದರೆ ಇದು ಅಂತಾರಾಷ್ಟ್ರೀಯ ಸರಾಸರಿ(ಶೇ.76)ಗಿಂತಲೂ ಶೇ.7ರಷ್ಟು ಹೆಚ್ಚು ಎಂದೂ ವರದಿ ಹೇಳಿದೆ.
ಭಾರತದ ಮಕ್ಕಳು ಮೊಬೈಲ್‌ಗಳಿಗೆ ಹೆಚ್ಚು ತೆರೆದುಕೊಂಡಿರುವ ಕಾರಣ ಅವರು ಆನ್‌ಲೈನ್ ಅಪಾಯಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂಬ ಆತಂಕವನ್ನೂ ವರದಿ ಹೊರಹಾಕಿದೆ.
ಈಗಾಗಲೇ ಶೇ.22ರಷ್ಟು ಭಾರತೀಯ ಪುಟಾಣಿಗಳು ಸೈಬರ್ ಚುಡಾಯಿಸುವಿಕೆಯನ್ನು ಅನುಭವಿಸಿದ್ದಾರೆ. ಜಾಗತಿಕವಾಗಿ ಸೈಬರ್ ಚುಡಾಯಿಸುವಿಕೆಗೆ ಒಳಗಾದ ಮಕ್ಕಳ ಪ್ರಮಾಣ ಶೇ.17ರಷ್ಟಿದ್ದರೆ, ಭಾರತದಲ್ಲಿ ಈ ಪ್ರಮಾಣ ಶೇ.5ರಷ್ಟು ಹೆಚ್ಚಿದೆ ಎಂದೂ ವರದಿ ಹೇಳಿದೆ.
-ಸ್ಮಾರ್ಟ್‌ಫೋನ್ ಬಳಸುತ್ತಿರುವ 10-14 ವಯಸ್ಸಿನ ಭಾರತೀಯ ಮಕ್ಕಳು- ಶೇ.83
-ಸ್ಮಾರ್ಟ್‌ಫೋಟ್ ಬಳಸುತ್ತಿರುವ ಮಕ್ಕಳ ಜಾಗತಿಕ ಸರಾಸರಿ- ಶೇ.76
-ತಮ್ಮ ಸ್ಮಾರ್ಟ್‌ಫೋನ್‌ಗೆ ಪಾಸ್‌ವಾರ್ಡ್ ಹಾಕಿರುವ ಹೆತ್ತವರು – ಶೇ.56
-ಮಕ್ಕಳ ಸ್ಮಾರ್ಟ್‌ಫೋನ್‌ಗೆ ಪಾಸ್‌ವರ್ಡ್ ರಕ್ಷಣೆ ನೀಡಿರುವವರು – ಶೇ.42
-ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕ್ಕೆ ಒಳಗಾಗುವ ಮಕ್ಕಳ ಜಾಗತಿಕ ಸರಾಸರಿ- ಶೇ.57
-ಇಂಥ ಅವಹೇಳನ, ದೌರ್ಜನ್ಯಕ್ಕೆ ಒಳಗಾಗುತ್ತಿರುವ ಭಾರತೀಯ ಮಕ್ಕಳು- ಶೇ.47