Advertisement

ಭಾರತ ಮೂಲದ ಉದ್ಯಮಿಗೆ ಯುಎಇ ಶಾಶ್ವತ ಪೌರತ್ವ

12:43 AM Jul 10, 2019 | mahesh |

ದುಬಾೖ: ಯುಎಇ ರಾಷ್ಟ್ರದ ದೈತ್ಯ ಕಂಪೆನಿಗಳಲ್ಲಿ ಒಂದಾದ “ಕಿಂಗ್‌ಸ್ಟನ್‌ ಹೋಲ್ಡಿಂಗ್ಸ್‌ ಕಂಪೆನಿ’ಯ ಮಾಲೀಕ ಲಾಲೊ ಸ್ಯಾಮ್ಯುಯೆಲ್‌ ಅವರಿಗೆ ಅಲ್ಲಿನ ಸರಕಾರ “ಯುಎಇ ಶಾಶ್ವತ ಪೌರತ್ವ’ ನೀಡಿದೆ. ಸೋಮವಾರ, ಶಾರ್ಜಾದ ವಿದೇಶಾಂಗ ವ್ಯವಹಾರ ಮತ್ತು ಶಾಶ್ವತ ಪೌರತ್ವ ವ್ಯವಹಾರಗಳ ಇಲಾ ಖೆಯ ಮಹಾ ನಿರ್ದೇಶಕ ಬ್ರಿ| ಆರಿಫ್ ಅಲ್‌ ಶಮಿ ಅವರು, ಲಾಲೊ ಅವ ರಿಗೆ ಶಾಶ್ವತ ಪೌರತ್ವದ ಸಂಕೇತವಾದ “ಗೋಲ್ಡ್‌ ಕಾರ್ಡ್‌’ ಅನ್ನು ಹಸ್ತಾಂತರಿಸಿದರು. ಈ ಮೂಲಕ, ಯುಎಇ ನಲ್ಲಿ ಗೋಲ್ಡ್‌ ಕಾರ್ಡ್‌ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಲಾಲೊ ಪಾತ್ರರಾಗಿದ್ದಾರೆ.

Advertisement

ಇದೇ ವೇಳೆ, ಭಾರತ ಮೂಲದ ಮತ್ತೂಬ್ಬ ಉದ್ಯಮಿ, ಕೇರಳ ಮೂಲದ ಪಿ.ಎ. ಇಬ್ರಾಹಿಂ ಹಾಜಿ (ಮಲಬಾರ್‌ ಗೋಲ್ಡ್‌ ಸಂಸ್ಥೆಯ ಸಹ ಮುಖ್ಯಸ್ಥ ಹಾಗೂ ಪೇಸ್‌ ಗ್ರೂಪ್‌ ಮುಖ್ಯಸ್ಥ) ಅವರಿಗೂ ಗೋಲ್ಡ್‌ ಕಾರ್ಡ್‌ ವಿತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next