Advertisement

ಪಾಕ್‌ ನುಸುಳುಕೋರನನ್ನು ಬಂಧಿಸಿದ ಭಾರತೀಯ ಗಡಿ ಭದ್ರತಾ ಪಡೆ

09:25 PM Mar 10, 2023 | Team Udayavani |

ನವದೆಹಲಿ: ಪಂಜಾಬ್‌ನಲ್ಲಿರುವ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಒಳನುಸುಳಲು ಯತ್ನಿಸಿದ ಪಾಕ್‌ ನುಸುಳುಕೋರನನ್ನು ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಶುಕ್ರವಾರ ಬಂಧಿಸಿದ್ದಾರೆ.

Advertisement

ನುಸುಳುಕೋರ ಗುರುವಾರ ನಡುರಾತ್ರಿ ಫಿರೋಜ್‌ಪುರದ ತಿರತ್‌ ಗಡಿಪೋಸ್ಟ್‌ ದಾಟಿದ್ದ. ಈ ವೇಳೆ ಸಿಬ್ಬಂದಿ ಆತನನ್ನು ಸೆರೆ ಹಿಡಿದಿದ್ದಾರೆ. ಗುಪ್ತಚರ ಅಧಿಕಾರಿಗಳು ಹಾಗೂ ಭದ್ರತಾ ಪಡೆಗಳು ಆತನ ತನಿಖೆ ನಡೆಸುತ್ತಿದ್ದು, ಆತ ಪಾಕಿಸ್ತಾನದ ಖೈಬರ್‌ ಪ್ರಾಂತ್ಯದ ನಿವಾಸಿ ಎಂಬುದು ತಿಳಿದುಬಂದಿದೆ.

ಜಂಟಿ ವಿಚಾರಣೆ ಪ್ರಗತಿಯಲ್ಲಿದ್ದು, ಆ ಬಳಿಕ ನುಸುಳುಕೋರನನ್ನು ಸ್ಥಳೀಯ ಪೊಲೀಸರ ವಶಕ್ಕೆ ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next