Advertisement

8300 ಕೋಟಿ ಹಗರಣದಲ್ಲಿ ಭಾರತ ಮೂಲದ ಉದ್ಯಮಿ ಬಂಧನ

10:35 PM Jul 02, 2024 | Team Udayavani |

ವಾಷಿಂಗ್ಟನ್‌: ಭಾರತ ಮೂಲದ ಅಮೆರಿಕದ ಉದ್ಯಮಿ ರಿಷಿ ಶಾ 8300 ಕೋಟಿ ರೂ. ಹಗರಣದಲ್ಲಿ ಸಿಲುಕಿಕೊಂಡ ಕಾರಣ ಅಮೆರಿಕದ ಕೋರ್ಟ್‌ ಅವರಿಗೆ 7.5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

Advertisement

ಪ್ರತಿಷ್ಠಿತ ಜಾಗತಿಕ ಕಂಪನಿಗಳಾದ ಗೋಲ್ಡಮನ್‌ ಸ್ಯಾಕ್ಸ್‌ ಗ್ರುಪ್‌, ಗೂಗಲ್‌ ಪೇರೆಂಟ್‌ ಅಲ್ಫಾಬೆಟ್‌, ಪ್ರಿಟ್ಸ್‌ಕರ್‌ ಕಂಪನಿಗಳಿಗೆ ವಂಚನೆ ಮಾಡಿದ ಹಿನ್ನೆಲೆ ರಿಷಿ ಶಾಗೆ ಶಿಕ್ಷೆ ವಿಧಿಸಲಾಗಿದೆ.

ಯಾರು ಈ ರಿಷಿ ಶಾ?: ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಿರುವ ರಿಷಿ ಶಾ, 2006ರಲ್ಲಿ ಔಟಕಮ್‌ ಹೆಲ್ತ್‌ ಕಂಪನಿ ಸ್ಥಾಪಿಸಿದ್ದರು. ವೈದ್ಯಕೀಯ ಕ್ಷೇತ್ರದ ಜಾಹೀರಾತು  ಕಂಪನಿ ಇದಾಗಿದ್ದು, ಬಹುಬೇಗ ವ್ಯಾಪಕವಾಗಿ ಬೆಳೆದಿತ್ತು.

ಏನಿದು ಪ್ರಕರಣ?: ಹೂಡಿಕೆದಾರರಿಗೆ, ಗ್ರಾಹಕರಿಗೆ ರಿಷಿ ಶಾ 8300 ಕೋಟಿ ರೂ. ವಂಚನೆ, ನಕಲಿ ದಾಖಲೆ ಸೃಷ್ಟಿಸಿರುವುದಾಗಿ 2017ರಲ್ಲಿ ಆರೋಪ ಕೇಳಿಬಂದಿದ್ದವು. ಹೂಡಿಕೆ ಮಾಡಿದ ಕಂಪನಿಗಳು ಶಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹಲವು ವರ್ಷಗಳ ವಿಚಾರಣೆ ಬಳಿಕ ರಿಷಿ ಶಾ ತಪ್ಪೊಪ್ಪಿಕೊಂಡಿದ್ದು, ಕೋರ್ಟ್‌ ಅವರಿಗೆ 7.5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next