ಬೆಂಗಳೂರು: ಅಲಹಾಬಾದ್ ಬ್ಯಾಂಕ್ ವಿಲೀನಗೊಂಡಿರುವ ಹಿನ್ನೆಲೆಯಲ್ಲಿ ತನ್ನ “ಸಮಗ್ರ ಬ್ಯಾಂಕಿಂಗ್ ಪರಿಹಾರ’ (ಸಿಬಿಎಸ್) ವೇದಿಕೆ ಮೂಲಕ ಇಂಡಿಯನ್ ಬ್ಯಾಂಕ್ ಯಶಸ್ವಿಯಾಗಿ ಸಂಯೋಜನೆಯನ್ನು ಪೂರ್ಣಗೊಳಿಸಿದೆ. ಹೀಗಾಗಿ, ಸಿಬಿಎಸ್ ಹಾಗೂ ಇತರ ಸೇವೆಗಳು ಫೆ.15ರಿಂದ ಬೆಳಗ್ಗೆ 9 ಗಂಟೆಯಿಂದ ಎಲ್ಲಾ ಶಾಖೆಗಳಲ್ಲಿ ಗ್ರಾಹಕರಿಗೆ ಲಭ್ಯವಾಗಿವೆ. ಸಂಯೋಜನೆ ಪ್ರಕ್ರಿಯೆ ಸರಳ ಮತ್ತು ಸಹಜವಾಗಿ ಮುಗಿದಿದೆ. ಇದೊಂದು “ಬಿಗ್ ಬ್ಯಾಂಗ್’ ವಿಲೀನವಾಗಿದ್ದು, ಟಿಸಿಎಸ್‌ನ ತಾಂತ್ರಿಕ ನೆರವಿನೊಂದಿಗೆ ಅಲಹ ಬಾದ್ ಬ್ಯಾಂಕಿನ 3 ಸಾವಿರಕ್ಕೂ ಹೆಚ್ಚು ಶಾಖೆಗಳ ದತ್ತಾಂಶ ಇಂಡಿಯನ್ ಬ್ಯಾಂಕ್ ಡೇಟಾಬೇಸ್‌ಗೆ ಸೇರಿಕೊಂಡಿದೆ.
ಎರಡೂ ಬ್ಯಾಂಕಿನ ಗ್ರಾಹಕರ ಖಾತೆಗಳ ಸಂಖ್ಯೆ ಅದೇ ಇರಲಿದೆ. ಜೊತೆಗೆ ಇಂಟರ್‌ನೆಟ್, ಮೊಬೈಲ್ ಬ್ಯಾಂಕಿಂಗ್ ಲಾಗಿನ್‌ಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಲಹ ಬಾದ್ ಬ್ಯಾಂಕಿನ ಗ್ರಾಹಕರು ಇಂಡಿಯನ್ ಬ್ಯಾಂಕ್‌ನ “ಇಂಡೋ ಓಯಾಸಿಸ್’ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಬಳಸಬಹುದು.
ಇದನ್ನೂ ಓದಿ:ಅಕಾಲಿಕ ಮಳೆ: ಸಿಡಿಲು ಬಡಿದು ಗಿಡಕ್ಕೆ ಬೆಂಕಿ
ಇಂಡಿಯನ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಸಿಇಒ ಪದ್ಮಜಾ ಚುಂದುರು, ಯಶಸ್ವಿ ಸಂಯೋಜನೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ವಿಲೀನ ಘೋಷಣೆಯಾದ ತಕ್ಷಣ “ಪ್ರಾಜೆಕ್ಟ್ ಸಂಗಮ್’ಗೆ ಚಾಲನೆ ನೀಡಲಾಯಿತು.
ಇದು ನಮ್ಮ ವಿಲೀನ ಪ್ರಯಾಣದ ಕೊನೆಯ ಹಂತವಾಗಿದೆ. ಕೋವಿಡ್ ಕಾರಣಕ್ಕೆ ವಿಲೀನ ಪ್ರಯಾಣ ಸಾಕಷ್ಟು ಸವಾಲುಗಳನ್ನು ಎದುರಿಸಿತು. ಆದರೆ, ನಮ್ಮ ತೀರ್ಮಾನ ಮತ್ತು ಬದ್ಧತೆ ಸಂಯೋಜನೆ ಪ್ರಕ್ರಿಯೆನ್ನು ಸರಳವಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು ಎಂದಿದ್ದಾರೆ.