Advertisement

ಇಂಡಿಯನ್‌ ಬ್ಯಾಂಕ್‌ ಸಿಎಂಡಿ ಪದ್ಮಜಾ ಚುಂದೂರು

11:36 AM Sep 26, 2018 | Team Udayavani |

ಚೆನ್ನೈ: ಸಾರ್ವಜನಿಕ ಕ್ಷೇತ್ರದ ಇಂಡಿಯನ್‌ ಬ್ಯಾಂಕ್‌ ನೂತನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಆಗಿ ಪದ್ಮಜಾ ಚುಂದೂರು ಅವರು ಸೆ.21 ರಂದು ಅಧಿಕಾರ ಸ್ವೀಕರಿಸಿದ್ದಾರೆ.

Advertisement

ಈ ಹಿಂದೆ ಮುಂಬೈನ ಎಸ್‌ಬಿಐ ಕಾರ್ಪೋರೆಟ್‌ ಸೆಂಟರ್‌ನಲ್ಲಿ ಡೆಪ್ಯೂಟಿ ಮ್ಯಾನೇಜಿಂಗ್‌ ಡೈರೆಕ್ಟರ್‌ (ಡಿಎಂಡಿ-ಜಾಗತಿಕ ಮಾರುಕಟ್ಟೆ ಮತ್ತು ಡಿಜಿಟಲ್‌ ಬ್ಯಾಂಕಿಂಗ್‌)ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪದ್ಮಜಾ ಆಂಧ್ರ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಾಣಿಜ್ಯ ಪದವಿ ಪಡೆದಿದ್ದಾರೆ.

1984ರಲ್ಲಿ ಎಸ್‌ಬಿಐ ಅಧಿಕಾರಿಯಾಗಿ ಸೇವೆಗೆ ಸೇರಿದ ಅವರು, ಸತತ ಮೂರು ದಶಕಗಳ ಕಾಲ ಎಸ್‌ಬಿಐನ ದೇಶ-ವಿದೇಶಗಳ ಎಲ್ಲ ವಿಭಾಗಗಳಲ್ಲೂ ಸೇವೆ ಸಲ್ಲಿಸಿರುವ ಅನುಭವ ಅವರಿಗಿದೆ.

2006 ರಿಂದ 2017ರವರೆಗೆ ಯುಎಸ್‌ಎ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ನಂತರ ಕಂಟ್ರಿ ಹೆಡ್‌ ಆಗಿ ಸೇವೆ ಸಲ್ಲಿದ್ದಾರೆ. ಲಾಸ್‌ಏಂಜೆಲಿಸ್‌ ಏಜೆನ್ಸಿ (ಯುಎಸ್‌ಎ)ಯ ಕ್ರೆಡಿಟ್‌ ಆಪರೇಷನ್ಸ್‌ ಉಪಾಧ್ಯಕ್ಷೆಯಾಗಿ ಹಾಗೂ ಸಿಇಒ ಕೂಡ ಆಗಿದ್ದರು ಎಂದು ಬ್ಯಾಂಕ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next